ನವದೆಹಲಿ : ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ ಬಿಜೆಪಿ ಜೆಡಿಎಸ್ಗೆ ತೀವ್ರ ಮುಜುಗರ ಉಂಟುಮಾಡಿದೆ. ಈ ವಿಚಾರ ತಿಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಯಡಿಯೂರಪ್ಪರಿ ಹಾಗೂ ಕುಮಾರಸ್ವಾಮಿಗೆ ಕರೆ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೋಂ ಮಿನಿಸ್ಟರ್ ನೇರವಾಗಿ ರಾಜ್ಯ ಮೈತ್ರಿ ನಾಯಕರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.ಈ ಪ್ರಕರಣದಿಂದ ಬಿಜೆಪಿ ನಾಯಕರಿಗೆ ಮುಜುಗರವಾಗಿದೆ. ಇಡೀ ದೇಶಾದ್ಯಂತ ಪ್ರಜ್ವಲ್ ರೇವಣ್ಣ ವಿಚಾರ ಸದ್ದು ಮಾಡ್ತಿದೆ. ಎರಡನೇ ಹಂತದ ಚುನಾವಣಾ ಪ್ರಚಾರದಲ್ಲಿ ಪಕ್ಷಕ್ಕೆ ಮುಜುಗರವಾಗ್ತಿದೆ. ಮೋದಿ ರಾಜ್ಯದಲ್ಲಿ ಇರುವಾಗಲೇ ಕಾಂಗ್ರೆಸ್ ಪ್ರತಿಭಟನೆ ಮಾಡಿ ಮುಜುಗರ ಉಂಟು ಮಾಡಿದೆ ಎಂದು ಗರಂ ಆಗಿದ್ದಾರೆ. ಈ ಪ್ರಕರಣದ ಬಗ್ಗೆ ಮೊದಲೇ ಯಾಕೆ ಗಂಭೀರವಾಗಿ ಪರಿಗಣಿಸಲಿಲ್ಲ. ಮೈತ್ರಿಯಾಗುವ ಮುನ್ನವೇ ಈ ವಿಚಾರ ತಿಳಿಗೊಳಿಸಬೇಕಿತ್ತು. ಚುನಾವಣೆ ಹೊಸ್ತಿಲಲ್ಲಿ ವಿಪಕ್ಷಗಳು ಪ್ರಶ್ನೆ ಮಾಡುವಂತಾಗಿದೆ. ಪ್ರಚಾರಕ್ಕೆ ಹೋದಲೆಲ್ಲಾ ವಿಪಕ್ಷಗಳು ಪ್ರಜ್ವಲ್ ಪ್ರಕರಣವನ್ನು ಅಸ್ತ್ರವನ್ನಾಗಿ ಮಾಡಿಕೊಂಡಿವೆ. ತಕ್ಷಣವೇ ಕ್ರಮ ಜರುಗಿಸಿ ಪ್ರಕರಣ ಇತ್ಯರ್ಥಗೊಳಿಸಿ ಎಂದು ತಾಕೀತು ಮಾಡಿದ್ದಾರೆ.
