ಬೆಂಗಳೂರು: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ವಿಡಿಯೋ ಮಾಡಿ ವೈರಲ್ ಮಾಡಿರುವ ಆರೋಪದ ಮೇಲೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಬಿಜೆಪಿ ನಾಯಕ ಪ್ರೀತಂ ಗೌಡ ಮತ್ತು ಇವರ ಆಪ್ತರಾದ ಕಿರಣ, ಶರತ್ ವಿರುದ್ಧ ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಜ್ವಲ್ ರೇವಣ್ಣ, ಪ್ರೀತಂ ಗೌಡ, ಕಿರಣ, ಶರತ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್ 354(ಎ) ಲೈಗಿಂಕ ಕಿರುಕುಳ, 354(ಡಿ) ಮಹಿಳೆಯ ನಿರಾಸ್ತಕಿ ಹೊರತಾಗಿ ಎಲೆಕ್ಟ್ರಾನಿಕ್ ಸಂಹವನಗಳನ್ನು ಪದೇ ಪದೇ ಅನುಸರಿಸುವ ಮೇಲ್ವಿಚಾರಣೆ ಮಾಡುವ ಅಪರಾಧ, 354(ಬಿ) ಮಹಿಳೆ ಮೇಲೆ ಆಕ್ರಮಣ ಮಾಡುವ ಕ್ರಿಮಿನಲ್ ಬಲವನ್ನು ಬಳಸುವ ವಿವಸ್ತ್ರವಾಗಿರಲು ಒತ್ತಾಯಿಸುವುದು, 506 ಕ್ರಿಮಿನಲ್ ಬೆದರಿಕೆ ಮತ್ತು 66ಇ ಐಟಿ ಆಕ್ಟ್ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿರುತ್ತದೆ.
ಇಂದು ಮತ್ತೆ ಪ್ರಜ್ವಲ್ ರೇವಣ್ಣನನ್ನು ನಾಲ್ಕು ದಿನಗಳ ಕಾಲ ಎಸ್‌ಐಟಿ ಅಧಿಕಾರಿಗಳ ಕಸ್ಟಡಿಗೆ ನೀಡಿ 42ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿತ್ತು. ಜೂನ್ 29ರವರೆಗೂ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಲಾಗಿದೆ. ಮಹಿಳೆಯರ ಖಾಸಗಿ ದೃಶ್ಯಗಳ ಮೊಬೈಲ್‌ನಲ್ಲಿ ಸೆರೆ ಹಿಡಿದು, ಅದನ್ನು ಬಹಿರಂಗ ಪಡಿಸಿದಕ್ಕೆ ಎಫ್‌ಐಆರ್ ದಾಖಲಾಗಿದೆ.