ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದೆ ಎನ್ನಲಾದ ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ್ ಪ್ರಕರಣವು ದೇಶಾದ್ಯಂತ ಸದ್ದು ಮಾಡುತ್ತಿದೆ. ಇದೀಗ ಪ್ರಜ್ವಲ್ ರೇವಣ್ಣ ಅವರನ್ನು ಹುಡುಕಿಕೊಟ್ಟವರಿಗೆ ನಗದು ಬಹುಮಾನ ಘೋಷಣೆ ಮಾಡಲಾಗಿದೆ.
ಸದರಿ ಹಗರಣದಿಂದಾಗಿ ದೇಶಾದ್ಯಂತ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಮಟ್ಟದ ಹಗರಣವೆಂದು ಕುಖ್ಯಾತವಾಗಿದೆ. ಸದರಿ ಹಗರಣದಿಂದಾಗಿ ಹಾಸನ ಜಿಲ್ಲೆಯ, ಕರ್ನಾಟಕ ರಾಜ್ಯದ, ಸಮಸ್ತ ಕನ್ನಡಿಗರ ಘನತೆಗೆ ಧಕ್ಕೆ ಉಂಟಾಗಿದೆ. ಪ್ರಭಾವಿ ಕುಟುಂಬದ ಹಾಗೂ ಜನಪ್ರತಿನಿಧಿಯಾದ ವ್ಯಕ್ತಿಯೇ ಈ ರೀತಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಆರೋಪ ಹೊತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ವಿಷಯ ಎಂದು ಪಕ್ಷದ ಜನತಾ ಪಕ್ಷದ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ನಾಗೇಶ್ ಎನ್ ದೂರಿದರು.
ನಗದು ಬಹುಮಾನ ಎಷ್ಟು? ಪೋಸ್ಟರ್ ಬಿಡುಗಡೆ
ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಜನತಾ ಪಕ್ಷ ಕೆಂಡಾಮಂಡಲವಾಗಿದೆ. ‘ಪ್ರಜ್ವಲ್ ಮಿಸ್ಸಿಂಗ್ ಅವಾರ್ಡ್’ ಹೆಸರಿನಲ್ಲಿ 01ಲಕ್ಷ ರೂಪಾಯಿ ನಗದು ಬಹುಮಾನ ಘೋಷಣೆ ಮಾಡಲಾಗಿದೆ. ಈ ಕುರಿತು ಶನಿವಾರ ಪ್ರಜ್ವಲ್ ವಿರುದ್ಧ ಪೋಸ್ಟರ್ ಅನ್ನು ಪಕ್ಷ ಬಿಡುಗಡೆ ಮಾಡಲಿದೆ ಎಂದು ಅವರು ತಿಳಿಸಿದರು.