ಶಿವಮೊಗ್ಗ: ಪ್ರತಾಪ್ ಸಿಂಹ ಅವರಂತಹ ರಾಷ್ಟ್ರಭಕ್ತ ಹಾಗೂ ಹಿಂದುತ್ವವಾದಿಯನ್ನು ಖಂಡಿಸಲು ಯಾರಿಂದಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಸತ್ ಭವನದಲ್ಲಿ ಭಾರೀ ಭದ್ರತೆ ಇದ್ದರು ಸಹ ಕಿಡಿಗೇಡಿಗಳು ನುಗ್ಗಿ ಇಂತಹ ಕೃತ್ಯ ನಡೆಸಿದ್ದು ಬಹಳ ಆಘಾತಕಾರಿ ಮತ್ತು ಮನಸ್ಸಿಗೆ ನೋವನ್ನುಂಟು ಮಾಡುವ ಸಂಗತಿ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಪ್ರಥಮ ಅಧಿವೇಶನದ ಮೊದಲ ದಿನದ ಕಾರ್ಯಕಲಾಪ ನಡೆಯುತ್ತಿದ್ದಾಗ ಯಜಮಾನರೊಬ್ಬರು ವಿಧಾನಸಭೆಯನ್ನು ಪ್ರವೇಶಿಸಿ ಶಾಸಕರು ಕೂರುವ ಸೀಟಿನ ಮೇಲೆ ಕುಳಿತಿದ್ದರು. ಅಚಾತುರ್ಯ ನಡೆದಿದೆ ಎಂದು ಹೇಳಿದರು.
ಇನ್ನೂ ಸಂಸದ ಪ್ರತಾಪ್ ಸಿಂಹ ವಿರುದ್ಧ ತನಿಖೆ ನಡೆಯಬೇಕು ಅಂತ ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ ಎಂದು ಹೇಳಿದ್ದಕ್ಕೆ ಕಾಂಗ್ರೆಸ್ ನಾಯಕರಿಗೆ ಮಾಡಲು ಬೇರೆ ಕೆಲಸವಿಲ್ಲ ಪ್ರತಾಪ್ ಸಿಂಹ ನಂತಹ ರಾಷ್ಟ್ರಭಕ್ತ ಹಾಗೂ ಹಿಂದುತ್ವವಾದಿಯನ್ನು ಶಂಕಿಸುವುದು, ಖಂಡಿಸುವುದು ಕೇವಲ ಕಾಂಗ್ರೆಸ್ ಅವರಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಮಥುರಾದಲ್ಲಿ ಸರ್ವೆ ಮಾಡಲು ಬಂದಿರುವ ಕೋರ್ಟ್ ಆದೇಶವನ್ನು ಕಾಂಗ್ರೆಸಿನ ಯಾರಾದರು ಸ್ವಾಗತ ಮಾಡುತ್ತಾರ? ಕಾಂಗ್ರೆಸ್ ಅವರಿಗೆ ಒಂದು ರೀತಿಯ ನೋವು ಉಂಟಾಗಿದೆ, ಮುಸ್ಲಿಮರಿಗೆ ನೋವಾದರೆ ಕಾಂಗ್ರೆಸ್ ನವರಿಗೆ ಸಹಿಸಲು ಆಗಲ್ಲ ಎಂದು ಟೀಕಿಸಿದರು.