ಕೊಪ್ಪಳ: ಪೊಲೀಸ್ ಇಲಾಖೆಯಲ್ಲಿ ದಿನದ ವಸೂಲಿ ಟಾರ್ಗೆಟ್ ನೀಡಲಾಗಿದೆ. ಪ್ರತಿ ದಿನ ಸಂಜೆ ಕಲೆಕ್ಷನ್ ಬರದಿದ್ದರೆ ಪೊಲೀಸರು ವಿಲಿವಿಲಿ ಆಗಿಬಿಡ್ತಾರೆ ಎಂದು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿದ್ದಾರೆ.
ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ಅವರು ಮಾತನಾಡಿದ ಅವರು ಈ ವೇಳೆ ಪಿಎಸ್‍ಐ ಪರಶುರಾಮ್ ಸಾವಿನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದಲ್ಲಿ ಎಲ್ಲಾ ಅಧಿಕಾರಿಗಳು ಒತ್ತಡದಲ್ಲೇ ಕೆಲಸ ಮಾಡಬೇಕು. ಸಿಎಂ ಹಾಗೂ ಗೃಹ ಸಚಿವರ ಒತ್ತಡದಲ್ಲೇ ಕೆಲಸ ಮಾಡ್ತಿದ್ದಾರೆ. ಮೊದಲು ಶಾಸಕರು ಹಾಗೂ ಸಚಿವರು ವರ್ಗಾವಣೆ ವಿಚಾರವಾಗಿ ಮನವಿ ಮಾಡ್ತಿದ್ರು. ಈಗ ಅದು ದಂಧೆಯಾಗಿ ಬದಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಬೆಳವಣಿಗೆಯನ್ನು ಸಣ್ಣಪುಟ್ಟವರು ಕಂಟ್ರೋಲ್ ಮಾಡೋಕೆ ಆಗಲ್ಲ. ದೊಡ್ಡವರಿಂದಲೇ ಎಲ್ಲಾ ಕಂಟ್ರೋಲ್ ಮಾಡಬೇಕು. ಈಗ ಒಂದು ರೂಟ್ ಮ್ಯಾಪ್ ಹಾಕಲಾಗಿದೆ. ಇಲಾಖೆಯಲ್ಲಿ ದಿನದ ವಸೂಲಿ ಶುರುವಾಗಿದೆ. ಪ್ರತಿ ದಿನ ಪೊಲೀಸ್ ಅಧಿಕಾರಿಗಳು ಕಲೆಕ್ಷನ್ ಮಾಡಲೇಬೇಕು. ಈ ವ್ಯವಸ್ಥೆ ನಾನು ಇದ್ದಾಗಲೂ ಇತ್ತೂ, ಈಗಲೂ ಇದೆ. ಮುಂದೇನು ಇರಲಿದೆ ಎಂದು ಕಿಡಿಕಾರಿದ್ದಾರೆ.