ಚಿತ್ರದುರ್ಗ: ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ 2026-27ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕಾಗಿ ಪ್ರತಿಭಾವಂತ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು 5ನೇ ತರಗತಿ ತೇರ್ಗಡೆಯಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಪರಿಶಿಷ್ಟ ಜಾತಿಗೆ ಸೇರಿದ್ದು, ಕುಟುಂಬದ ವಾರ್ಷಿಕ ಆದಾಯ ರೂ.2.50 ಲಕ್ಷ ಮೀರಿರಬಾರದು. 5ನೇ ತರಗತಿಯಲ್ಲಿ ಶೇ.60 ರಷ್ಟು ಅಂಕ ಪಡೆದಿರಬೇಕು. ಬಾಲಕಿಯರಿಗೆ ಶೇ50ರಷ್ಟು ಸ್ಥಾನಗಳು ಮೀಸಲು ಇರುತ್ತವೆ. ಪ್ರತಿಷ್ಠತ ಶಾಲೆಗಳ ಆಯ್ಕೆ ಒಂದು ಕುಟುಂಬದಲ್ಲಿ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು. ವಿದ್ಯಾರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
ಆಯಾ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಕಛೇರಿಯಲ್ಲಿ ಆನ್ಲೈನ್ ನೊಂದಣಿ ಪ್ರಕ್ರಿಯೆ ನಡೆಯಲಿದೆ. ಪೋಷಕರು ನಿಗದಿತ ಅರ್ಜಿಯೊಂದಿಗೆ 04 ಪಾರ್ಸ್ಪೋರ್ಟ್ ಸೈಜ್ ಭಾವಚಿತ್ರ, 5ನೇ ತರಗತಿಯ ಅಂಕಪಟ್ಟಿ(ಪ್ರೋಗ್ರೆಸ್ ಕಾರ್ಡ್) ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಇತ್ಯಾದಿ ಅಗತ್ಯ ನಕಲು ದಾಖಲೆಗಳನ್ನು ಒದಗಿಸಬೇಕು. ಏಪ್ರಿಲ್ 15 ರಿಂದ ಅರ್ಜಿ ಸಲ್ಲಿಕೆ ಪ್ರಾರಂಭವಾಗಲಿದ್ದು, ಮೇ.4 ಕಡೆಯ ದಿನವಾಗಿದೆ. ನಂತರ ಬಂದAತಹ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

































