ಬೆಂಗಳೂರು: ಪ್ರಥಮ ಪಿಯು ಪೂರಕ ಪರೀಕ್ಷೆ ಮೇ 20 ರಿಂದ 31ರವರೆಗೆ ನಡೆಯಲಿದೆ. ಈ ಕುರಿತು ಕರ್ನಾಟಕ ಶಾಲಾ ಪರೀಕ್ಶೆ ಮತ್ತು ಮೌಲ್ಯನಿರ್ಣಯ ಮಂಡಳಿ ವೇಳಾಪಟ್ಟಿಯ ಪ್ರಕಟನೆಯನ್ನು ಮಾಡಿದ್ದು, ಜೂನ್ 6 ರಂದು ಪರೀಕ್ಷೆಯ ಫಲಿತಾಂಶ ಪ್ರಕಟವಾಗಬೇಕೆಂದು ಸೂಚನೆಯನ್ನು ನೀಡಿದೆ.
ಪಿಯುಸಿ ಪೂರಕ ಪರೀಕ್ಷೆಯನ್ನು ನಡೆಸಿಕೊಡುವ ಸಂಪೂರ್ಣ ಜವಾಬ್ದಾರಿ ಜಿಲ್ಲಾ ಉಪನಿರ್ದೇಶಕರಿಗೆ ನೀಡಲಾಗಿದೆ. ಮಾರ್ಚ್ 30ಕ್ಕೆ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗುತ್ತಿದ್ದು ಈ ಸಮಯದಲ್ಲಿ ಪೂರಕ ಪರೀಕ್ಷೆಗೆ ಶುಲ್ಕ ಕಟ್ಟಲು ಅನುವಾಗುವಂತೆ ಪ್ರತಿಯೊಂದು ಕಾಲೇಜುಗಳ ಸೂಚನ ಫಲಕದಲ್ಲಿ ಪೂರಕ ಪರೀಕ್ಷೆಗಳ ವಿವರಣೆಗಳನ್ನು ಪ್ರಕಟಿಸುವಂತೆ ಕೆಎಸ್ ಇಎಬಿ ಸೂಚನೆಯನ್ನು ನೀಡಿದೆ.
ದ್ವಿತಿಯ ಪಿಯುಸಿ ಪರೀಕ್ಷೆ ಮಾರ್ಚ್ 22ರಂದು ಪೂರ್ಣಗೊಂಡಿದ್ದು, ಮೌಲ್ಯಮಾಪನ ಪರೀಕ್ಷೆ ಈಗಾಗಲೇ ಪ್ರಾರಂಭವಾಗಿದೆ. ಈ ಬಾರಿ ಲೋಕಸಭಾ ಚುನಾವಣೆ ಇರುವ ಹಿನ್ನಲೆಯಲ್ಲಿ ಅದಕ್ಕೂ ಮುಂಚೆ ಫಲಿತಾಂಶ ಪ್ರಕಟವಾಗುವ ಸಾದ್ಯತೆ ಇದೆ.