ಪ್ರಧಾನಿ ಮೋದಿಗೆ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದ ಗ್ರೀಸ್‌

ಅಥೆನ್ಸ್‌: ಪ್ರಧಾನಿ ಮೋದಿಯವರಿಗೆ ಎರಡನೇ ’ಅತ್ಯುನ್ನತ ನಾಗರಿಕ ಪ್ರಶಸ್ತ’ಯನ್ನು ನೀಡಿ ಗೌರವಿಸಿದೆ. ಗ್ರೀಸ್ ಅಧ್ಯಕ್ಷೆ ಕಟರೀನಾ ಸಕೆಲ್ಲರೊಪೌಲೌ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ ಪ್ರಶಸ್ತಿ ಪ್ರಧಾನ ಮಾಡಿದರು.

ಈ ಅತ್ಯುನ್ನತ ಗೌರವಕ್ಕಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಗ್ರೀಸ್‌ಗೆ ಧನ್ಯವಾದ ತಿಳಿಸಿದ್ದಾರೆ. ನಾನು ಅಧ್ಯಕ್ಷೆ ಕಟರೀನಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಗ್ರೀಸ್ ಸರ್ಕಾರ ಮತ್ತು ಜನರಿಗೆ ಧನ್ಯವಾದಗಳು. ಇದು ಗ್ರೀಸ್ ಜನತೆಗೆ ಭಾರತದ ಬಗೆಗಿನ ಗೌರವವನ್ನು ತೋರಿಸುತ್ತದೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

40 ವರ್ಷಗಳ ಬಳಿಕ  ಭಾರತದ ಪ್ರಧಾನಿಯೊಬ್ಬರು ಗ್ರೀಸ್‌ಗೆ ಬಂದಿದ್ದಾರೆ. ಗ್ರೀಸ್ ಮತ್ತು ಭಾರತವು ಪ್ರಪಂಚದ 2 ಅತ್ಯಂತ ಹಳೆಯ ನಾಗರಿಕತೆಗಳು. 2 ಹಳೆಯ ಪ್ರಜಾಪ್ರಭುತ್ವ ಸಿದ್ಧಾಂತಗಳು ಮತ್ತು 2 ಹಳೆಯ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಬಂಧಗಳ ನಡುವಿನ ನೈಸರ್ಗಿಕ ಹೊಂದಾಣಿಕೆಯಾಗಿದೆ. ನಮ್ಮ ಸಂಬಂಧದ ತಳಹದಿಯು ಪುರಾತನ ಮತ್ತು ಬಲವಾದದ್ದು ಎಂದು ಗ್ರೀಸ್ ಹೇಳಿದೆ.

Advertisement

ಗ್ರೀಕ್-ಭಾರತೀಯ ಸ್ನೇಹದ ಕಾರ್ಯತಂತ್ರದ ಪ್ರಚಾರದಲ್ಲಿ ಪ್ರಧಾನಿ ಮೋದಿಯವರ ನಿರ್ಣಾಯಕ ಕೊಡುಗೆಯನ್ನು ಗುರುತಿಸಿ ಗ್ರೀಸ್ ಗೌರವಿಸಿದೆ. ಈ ಭೇಟಿಯ ಸಂದರ್ಭದಲ್ಲಿ ಗ್ರೀಕ್ ರಾಜ್ಯವು ಭಾರತದ ಪ್ರಧಾನ ಮಂತ್ರಿಯನ್ನು ಗೌರವಿಸುತ್ತದೆ.  ಅವರು ತಮ್ಮ ದೇಶದ ಜಾಗತಿಕ ವ್ಯಾಪ್ತಿಯನ್ನು ಉತ್ತೇಜಿಸಿದ ರಾಜಕಾರಣಿ ಮತ್ತು ಭಾರತದ ಆರ್ಥಿಕ ಪ್ರಗತಿ ಮತ್ತು ಸಮೃದ್ಧಿಗಾಗಿ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದಾರೆ. ದಿಟ್ಟ ಸುಧಾರಣೆಗಳನ್ನು ತರುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಸರ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯನ್ನು ಪ್ರಮುಖ ಆದ್ಯತೆಗಳಿಗೆ ತಂದ ರಾಜಕಾರಣಿ ಎಂದು ಬರೆದುಕೊಂಡಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement