ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಗಳಿಗೆ ನಮ್ಮ ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರಯಾಣಿಕರಿಗೆ ಭರ್ಜರಿ ಆಫರ್ ಘೋಷಣೆ ಮಾಡಿದೆ.
ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ವಿಶ್ವಕಪ್ ಪಂದ್ಯಗಳು ಅಕ್ಟೋಬರ್ 20, 26, ನವೆಂಬರ್ 4, 9, 12ರಂದು ನಡೆಯಲಿವೆ. ವಿಶ್ವಕಪ್ನ ಕೊನೆಯ ಲೀಗ್ ಪಂದ್ಯ ಕೂಡ ಬೆಂಗಳೂರಿನಲ್ಲೇ ನಡೆಯಲಿದೆ. ಕ್ರಿಕೆಟ್ ಪ್ರೇಮಿಗಳು ಪಂದ್ಯವನ್ನು ವೀಕ್ಷಿಸಿದ ಬಳಿಕ ತಮ್ಮ ನಿವಾಸಕ್ಕೆ ತೆರಳಲು ಕಷ್ಟಕರ ಆಗಬಾರದೆಂದು ಮೆಟ್ರೋ ಸೇವೆ ಅವಧಿ ವಿಸ್ತರಣೆ ಮಾಡಿದ್ದು, ಬೆಂಗಳೂರಿನ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ನ ಎಲ್ಲಾ 5 ದಿನಗಳು ಈ ರಿಯಾಯಿತಿ ಚಾಲ್ತಿಯಲ್ಲಿರುತ್ತದೆ. ಬಿಎಂಆರ್’ಸಿಎಲ್ ಎಲ್ಲಾ ಇತರ ಮೆಟ್ರೋ ನಿಲ್ದಾಣಗಳಿಗೆ ಕಬ್ಬನ್ ಪಾರ್ಕ್ ಮೆಟ್ರೋ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ 50 ರೂ. ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಗಳನ್ನು ನೀಡಲಾಗುತ್ತದೆ.
ಸಂಜೆ 4 ಗಂಟೆಯಿಂದಲೇ ಟಿಕೆಟ್ ಗಳು ಮಾರಾಟವಾಗುತ್ತಿದೆ. QR ಕೋಡ್ ಸಹಿತ ಪೇಪರ್ ಟಿಕೆಟ್’ಗಳು ಸ್ಮಾರ್ಟ್ ಕಾರ್ಡ್‌ಗಳನ್ನು ಪ್ರಯಾಣಕ್ಕೆ ಅನುಮತಿಸಲಾಗಿದೆ. ಐಸಿಸಿ ಕ್ರಿಕೆಟ್ ವಿಶ್ವಕಪ್ 2023ನ ಬೆಂಗಳೂರಿನಲ್ಲಿ ನಡೆಯಲಿರುವ ಎಲ್ಲ ಐದು ಪಂದ್ಯಗಳಿಗೂ ಈ ರಿಯಾಯಿತಿ ಅನ್ವಯವಾಗಲಿದೆ ಎಂದು ಎಂದು ಬಿಎಂಆರ್’ಸಿಎಲ್ ಘೋಷಣೆ ಮಾಡಿದೆ.