ನವದೆಹಲಿ: ಸಂಸತ್ ನಲ್ಲಿ ಪ್ರಶ್ನೆಗಾಗಿ ನಗದು ಆರೋಪ ಎದುರುಸುತ್ತಿರುವ ತೃಣಮೂಲ ಕಾಂಗ್ರೆಸ್ ಪಕ್ಷ(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಇಂದು ಉಚ್ಛಾಟಿಸಲಾಗಿದೆ.
ಹಣ ಪಡೆದು ತಮ್ಮ ಸಂಸದೀಯ ಪೋರ್ಟಲ್ ಬಳಸಿ ಉದ್ಯಮಿ ದರ್ಶನ್ ಹಿರಾನಂದಾನಿಗೆ ಪ್ರಶ್ನೆಗಳನ್ನು ಕೇಳಲು ಮಹುವಾ ಅವಕಾಶ ಕೊಟ್ಟಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲುಲೋಕಸಭೆ ನೀತಿ ಸಮಿತಿ ಶಿಫಾರಸು ಮಾಡಿತ್ತು.
ಮಹುವಾ ಅವರನ್ನು ಸದನದಿಂದ ಉಚ್ಚಾಟಿಸುವಂತೆ ಶಿಫಾರಸುಮಾಡಿದ್ದ 495 ಪುಟಗಳ ವರದಿಯನ್ನು ಲೋಕಸಭೆ ನೀತಿ ಸಮಿತಿ ಮುಖ್ಯಸ್ಥ ವಿನೋದ್ ಕುಮಾರ್ಸೋನಕರ್ ಅವರು, ಇಂದು ಮಧ್ಯಾ ಹ್ನ 12ಕ್ಕೆ ಮಂಡಿಸಿದ್ದರು.
ಸಂಸತ್ ನಲ್ಲಿ ಪ್ರಶ್ನೆ ಕೇಳಲು ನಗದು ಹಾಗೂ ಅಕ್ರಮವಾಗಿ ಬೆಲೆ ಬಾಳುವ ಉಡುಗೊರೆಗಳನ್ನು ಸ್ವೀಕರಿಸಿದ್ದು, ಹಾಗೂ ಸಂಸತ್ ನ ಲಾಗಿನ್ ವಿವರಗಳನ್ನೂ ನೀಡಿದ್ದು ಸಂಸದೆಯಾಗಿ ಮಾಡುವ ಕೆಲಸವಲ್ಲ ಮತ್ತು ಅನೈತಿಕ ವರ್ತನೆ ಎಂದು ವರದಿ ಹೇಳಿದೆ.