ಮುಂಬೈ: ಪದ್ಮಶ್ರೀ ಪುರಸ್ಕೃತ ಬಾಣಸಿಗ ಇಯ್ತಿಯಾಜ್ ಖುರೇಷಿ (93) ನಿಧನರಾಗಿದ್ದಾರೆ. 1931ರಲ್ಲಿ ಲಕ್ಷೆದಲ್ಲಿ ಜನಿಸಿದ ಖುರೇಷಿ, ತಮ್ಮ ವೈವಿಧ್ಯಮಯ ಅಡುಗೆಗಾಗಿ ಪ್ರಸಿದ್ಧರಾಗಿದ್ದರು.
ಅವರು ITC ಹೊಟೇಲ್‌ನ ಮಾಸ್ಟರ್ ಚೆಫ್ ಆಗಿದ್ದರು. ಪಾಕ ಕಲೆಗೆ ನೀಡಿದ ಕೊಡುಗೆಗಾಗಿ 2016ರಲ್ಲಿ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಅವರು ಈ ಗೌರವವನ್ನು ಪಡೆದ ಮೊದಲ ಬಾಣಸಿಗರಾಗಿದ್ದಾರೆ. ರಾಷ್ಟ್ರಪತಿ ಹಾಗೂ ಪ್ರಧಾನಿ ಭಾಗವಹಿಸುವ ಅನೇಕ ಕಾರ್ಯಕ್ರಮಗಳಿಗೆ ಅವರು ಬಾಣಸಿಗರಾಗಿ ಕೆಲಸ ಮಾಡಿದ್ದರು.