ಬೆಂಗಳೂರು: ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಗೆ 10 ಮಂದಿ ಶಿಕ್ಷಣ ತಜ್ಞರನ್ನು ನಾಮನಿರ್ದೇಶನ ಮಾಡಿ ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.
ವಿಶ್ರಾಂತ ಕುಲಪತಿಗಳಾದ ಪ್ರೊ. ಹೆಚ್.ಸಿ. ಬೋರಲಿಂಗಯ್ಯ, ಪ್ರೊ. ಕರಿಸಿದ್ದಪ್ಪ, ಪ್ರೊ.ಟಿ.ಡಿ.ಕೆಂಪರಾಜು, ನಿವೃತ್ತ ಕುಲಸಚಿವರಾದ ಪ್ರೊ.ಎಸ್.ಎ. ಪಾಟೀಲ್, ಪ್ರೊ. ಸುನಂದಮ್ಮ, ಪ್ರಾಧ್ಯಾಪಕರಾದ ಪ್ರೊ. ರಹಮತ್ ತರೀಕೆರೆ, ಪ್ರೊ. ತೆರೆಸಾ ಮಿಥಿಲಾ ವಿನ್ಸೆಂಟ್, ಡಾ.ಎನ್. ನಂದಿನಿ, ಪ್ರೊ. ಮಲ್ಲಿಕಾರ್ಜುನ ಆರ್. ಹಲಸಂಗಿ, ಡಾ. ಯತಿರಾಜುಲು ನಾಯ್ಡು ಅವರನ್ನು ಉನ್ನತ ಶಿಕ್ಷಣ ಪರಿಷತ್ತಿಗೆ ನೇಮಕ ಮಾಡಲಾಗಿದೆ.
ಮುಂದಿನ ಐದು ವರ್ಷಗಳ ಅವಧಿಗೆ ಅಥವಾ ಇವರಿಗೆ 70 ವರ್ಷ ವಯೋಮಾನ ಪೂರ್ಣಗೊಳ್ಳುವವರೆಗೆ ಅಥವಾ ಮುಂದಿನ ಆದೇಶದ ವರೆಗೆ ಇವರ ಅಧಿಕಾರ ಅವಧಿ ಇರಲಿದೆ ಎಂದು ಹೇಳಲಾಗಿದೆ.