ಕನ್ನಡ ಕಿರುತೆರೆ ನಾಗಿಣಿ ಧಾರಾವಾಹಿ ನಟಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಯಾವ ಧಾರಾವಾಹಿ ಹಾಗೂ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳದೇ ಪತಿ ಜೊತೆ ಪ್ರವಾಸದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ದಿನಕ್ಕೊಂದು ಸುಂದರ ಸ್ಥಳಗಳಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಇನ್‌ಸ್ಟಾಗ್ರಾಂನಲ್ಲಿ ದೀಪಿಕಾ ದಾಸ್ ಆ್ಯಕ್ಟಿವ್ ಆಗಿದ್ದಾರೆ.
ಯಾವ ಪ್ರಾಜೆಕ್ಟ್‌ನಲ್ಲೂ ಕಾಣಿಸಿಕೊಳ್ಳದೇ ಸೋಶಿಯಲ್ ಮೀಡಿಯಾ ಮೂಲಕವೇ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ದೀಪಿಕಾ ದಾಸ್ ಇಂದು ಹಂಚಿಕೊಂಡಿರುವ ವಿಡಿಯೋ ಅಭಿಮಾನಿಗಳಲ್ಲಿ ಆತಂಕ ಹುಟ್ಟಿಸಿದೆ. ಸುಂದರವಾದ ವಾಟರ್ ಫಾಲ್ಸ್ ಬಳಿ ನಡೆದು ಬರುವಾಗ ಆಕಸ್ಮಿಕವಾಗಿ ದೀಪಿಕಾ ದಾಸ್ ಕಾಲು ಜಾರಿ ಬಿದ್ದಿದ್ದಾರೆ. ವಾಟರ್ ಫಾಲ್ಸ್ ಬಳಿ ರೀಲ್ಸ್ ಮಾಡುವ ಮುಗ್ಗರಿಸಿ ಬಿದ್ದಿರುವ ವಿಡಿಯೋವನ್ನು ಸ್ವತಃ ದೀಪಿಕಾ ದಾಸ್ ಅವರೇ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದರೆ ಎಂತವರಿಗಾದರೂ ಎದೆ ಝಲ್ ಎನಿಸುತ್ತದೆ. ಈ ವಿಡಿಯೋದಲ್ಲಿ ನಡೆದು ಬರುತ್ತಿದ್ದ ದೀಪಿಕಾ ದಾಸ್ ಆಯತಪ್ಪಿ ಮುಖ ನೆಲಕ್ಕೆ ಹೊಡೆದುಕೊಂಡು ಬಿದ್ದಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ದೀಪಿಕಾ ದಾಸ್ ಬಿದ್ದಿರುವ ಈ ವಿಡಿಯೋ ವೈರಲ್ ಆಗಿದೆ.