ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜ. 31ಕ್ಕೆ ಅಂತ್ಯವಾಗಬೇಕಿದ್ದ ಫಾಸ್ಟ್‌ಟ್ಯಾಗ್‌ಗಳ ಕೆವೈಸಿ ಅನುಸರಣೆ ಗಡುವನ್ನು ಫೆ. 29 ರವರೆಗೆ ವಿಸ್ತರಿಸಿದೆ.
ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ “#FASTag ಬಳಕೆದಾರರ ಗಮನಕ್ಕೆ,#OneVehicleOneFASTag ಉಪಕ್ರಮದ ಗಡುವು ಮತ್ತು ನಿಮ್ಮ ಇತ್ತೀಚಿನ FASTag ಗಾಗಿ KYC ಅಪ್‌ಡೇಟ್ ಪೂರ್ಣಗೊಳಿಸುವಿಕೆಯನ್ನು 29ನೇ ಫೆಬ್ರವರಿ 2024 ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜ. 15 ರಂದು ಮಾನ್ಯ ಬ್ಯಾಲೆನ್ಸ್‌ಗಳನ್ನು ಹೊಂದಿರುವ, ಆದರೆ ಅಪೂರ್ಣ KYC ಯ ಖಾತೆಗಳನ್ನು ಜನವರಿ 31, 2024 ರ ನಂತರ ಬ್ಯಾಂಕ್‌ಗಳು ನಿಷ್ಕ್ರಿಯಗೊಳಿಸುತ್ತವೆ ಎಂದು ಹೇಳಲಾಗಿತ್ತು.
NHAI 1.27 ಕೋಟಿಯಲ್ಲಿ ಕೇವಲ 7 ಲಕ್ಷ ಬಹು ಫಾಸ್ಟ್‌ಟ್ಯಾಗ್‌ಗಳನ್ನು ಸ್ಥಗಿತಗೊಳಿಸಿದೆ. ಆದ್ದರಿಂದ, ನಾವು ಗಡುವನ್ನು ಇನ್ನೂ ಒಂದು ತಿಂಗಳು ವಿಸ್ತರಿಸಲು ಮುಂದುವರಿಯುತ್ತೇವೆ” ಎಂದು ಅಧಿಕಾರಿಯೊಬ್ಬರು ಮಾಹಿತಿಯನ್ನು ತಿಳಿಸಿದ್ದಾರೆ.