ಬೆಂಗಳೂರು : ಕೊಲೆ ಆರೋಪಿ ನಟ ದರ್ಶನ್ಗೆ ಬೆನ್ನು ನೋವಿನ ಸಮಸ್ಯೆ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಈ ಹಿಂದೆ ಅವರಿಗೆ ಫಿಜಿಯೋಥೆರಪಿ ಮಾಡಬೇಕು ಎಂದು ವೈದ್ಯರು ತಿಳಿಸಿದ್ದರು. ಈ ಬಗ್ಗೆ ವರದಿ ನೀಡಿದ್ದರು. ಇದೀಗ ಒಂದು ವಿಷಯದಲ್ಲಿ ಬದಲಾಗಿದ್ದು, ಅವರಿಗೆ ಫಿಜಿಯೋಥೆರಪಿ ಬದಲು ಸರ್ಜರಿಯೇ ಬಹುತೇಕ ಫಿಕ್ಸ್ ಆಗಿದೆ ಎಂದು ತಿಳಿದುಬಂದಿದೆ.
ಇನ್ನು ಫಿಜಿಯೋಥೆರಪಿ ಬದಲಗೆ ಸರ್ಜರಿಗೆ ದರ್ಶನ್ ಒಪ್ಪಿಗೆ ಸೂಚಿಸಿದ್ದಾರೆ. ಎರಡು ದಿನದಲ್ಲಿ ದರ್ಶನ್ಗೆ ಸರ್ಜರಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.