ನವದೆಹಲಿ: ಚೀನದಲ್ಲಿ ನಡೆದ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತದ ಪುಟ್ಬಾಲ್ ತಂಡ ಗೆಲುವು ಸಾಧಿಸಿದೆ. ಬಾಂಗ್ಲಾದೇಶದ ವಿರುದ್ಧದ ಎರಡನೇ ಫುಟ್ಬಾಲ್ ಪಂದ್ಯದಲ್ಲಿ ಭಾರತ 1-0 ಗೋಲುಗಳಿಂದ ಬಾಂಗ್ಲಾವನ್ನು ಮಣಿಸಿದೆ.
ಸುನಿಲ್ ಛೆಟ್ರಿ ಪಂದ್ಯದ ಕೊನೆಯ ನಿಮಿಷಗಳಲ್ಲಿ ಗೋಲು ಗಳಿಸಿ ಭಾರತದ ಜಯಕ್ಕೆ ಕಾರಣರಾದರು. ಇಂಟರ್‍ಕಾಂಟಿನೆಂಟಲ್ ಕಪ್ ಮತ್ತು ಎಸ್‍ಎಎಫ್‍ಎಫ್ ಗೇಮ್ಸ್‍ನಲ್ಲಿ ಗೆಲುವು ತಮ್ಮದಾಗಿಸಿಕೊಂಡ ಬೆನ್ನಲ್ಲೇ ಭಾರತ ಏಷ್ಯಾ ಗೇಮ್ಸ್ ಗೆ ಬಂದಿತ್ತು. ಭಾರತ ತಂಡ ಕಿಂಗ್ಸ್ ಕಪ್‍ನಲ್ಲೂ ಉತ್ತಮವಾಗಿ ಆಡಿತ್ತು.
ಆದರೆ ಸುನಿಲ್ ಛೆಟ್ರಿ ನೇತೃತ್ವದ ತಂಡವು ತನ್ನ ಆರಂಭಿಕ ಪಂದ್ಯದಲ್ಲಿ ಚೀನಾ ವಿರುದ್ಧ ಸೋಲು ಕಂಡಿತ್ತು.