ದೆಹಲಿ: ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಪ್ರಕರಣ ಬಗ್ಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಪಕ್ಷ , ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ರಿಪೋರ್ಟ್ ಕಾರ್ಡ್ ನೀಡಿ, ಆಕೆ ಫೇಲ್ ಎಂದು ಹೇಳಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಗೆ ಮಹಿಳೆಯರ ಕಷ್ಟದ ಬಗ್ಗೆ ಸುಳಿವು ಇರಲಿಲ್ಲ. ಎರಡು ತಿಂಗಳ ನಂತರ ಎಚ್ಚರಗೊಂಡಿದ್ದಾರೆ ಎಂದು ಕಾಂಗ್ರೆಸ್‌ನ ರಿಪೋರ್ಟ್ ಕಾರ್ಡ್ ಹೇಳಿದೆ.
ಈ ರಿಪೋರ್ಟ್ ಕಾರ್ಡ್ ಕುರಿತು ಪ್ರತಿಕ್ರಿಯಿಸಿದ ಸಚಿವೆ ಸ್ಮೃತಿ ಇರಾನಿ, ‘ಕಾಂಗ್ರೆಸ್ ಎರಡು ಅಂಶಗಳಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತದೆ. ಆ ಎರಡು ಅಂಶಗಳೆಂದರೆ ಭ್ರಷ್ಟಾಚಾರ ಮತ್ತು ಉದ್ದೇಶಪೂರ್ವ ನಿರ್ಲಕ್ಷ್ಯ’ ಎಂದು ತಿರುಗೇಟು ನೀಡಿದ್ದಾರೆ.
ಭ್ರಷ್ಟಚಾರ ಮತ್ತು ಉದ್ದೇಶಪೂರ್ವಕ ನಿರ್ಲಕ್ಷ್ಯ ಇವೆರಡರಲ್ಲೂ ಕಾಂಗ್ರೆಸ್ ಉತ್ತಮ ಅಂಕಗಳನ್ನು ಗಳಿಸುತ್ತದೆ. ರಾಜವಂಶಸ್ಥರು ಅನುಮತಿ ನೀಡಿದರೆ ಸಂಸತ್ತಿನಲ್ಲಿ ಚರ್ಚಿಸಿ ಎಂದು ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.