ಫೇಸ್‌ಬುಕ್‌ ನಲ್ಲಿ ಪರಿಚಯ – ಎಂಟು ಲಕ್ಷಕ್ಕೂ ಅಧಿಕ ವಂಚನೆ, ಪ್ರಕರಣ ದಾಖಲು

ಫೇಸ್‌ಬುಕ್‌ ಮೆಸೆಂಜರ್ ನಲ್ಲಿ ವಿದೇಶಿ ಮಹಿಳೆಯ ಹೆಸರಿನಿಂದ ಪರಿಚಯಿಸಿಕೊಂಡು 8.42 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್‌ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಂತರ ವಾಟ್ಸ್‌ಆಯಪ್‌ಗೆ ಸಂದೇಶಗಳನ್ನು ಕಳುಹಿಸಿ ತಾನು ವಿದೇಶದಲ್ಲಿರುವುದಾಗಿಯೂ ಭಾರತಕ್ಕೆ ಬಂದು ಭೇಟಿ ಮಾಡುವುದಾಗಿಯೂ ತಿಳಿಸಿದ್ದಳು.

ಅನಂತರ ಸೆ. 21ರಂದು ಕರೆ ಮಾಡಿ ತಾನು ಭಾರತಕ್ಕೆ ಬಂದಿದ್ದು ತನ್ನ ಬಳಿ 70,000 ವಿದೇಶಿ ಕರೆನ್ಸಿ ಇದ್ದು ಅದನ್ನು ವಿಮಾನ ನಿಲ್ದಾಣದ ಕಸ್ಟಮ್‌ ಅಧಿಕಾರಿ ವಶಪಡಿಸಿಕೊಂಡಿದ್ದಾನೆ. ಅದನ್ನು ಬಿಡಿಸಲು ಹಣ ಪಾವತಿಸಬೇಕಾಗಿದೆ ಎಂದಳು. ಅಲ್ಲದೆ ಕಸ್ಟಮ್‌ ಅಧಿಕಾರಿಯೆಂದು ಬಿಂಬಿಸಿ ಬೇರೊಂದು ವ್ಯಕ್ತಿಯ ಮೂಲಕ ಮಾತನಾಡಿಸಿದ್ದಳು.

Advertisement

ಇದನ್ನು ನಂಬಿದ ದೂರುದಾರರು ಮಹಿಳೆ ನೀಡಿದ ಬ್ಯಾಂಕ್‌ಗಳ ಖಾತೆಗೆ ಸೆ. 21ರಿಂದ 25ರ ವರೆಗೆ ಹಂತ ಹಂತವಾಗಿ ಒಟ್ಟು 8,43,050 ರೂ. ವರ್ಗಾಯಿಸಿದ್ದಾರೆ. ಅನಂತರವೂ ಮಹಿಳೆ ಹೆಚ್ಚಿನ ಹಣ ಪಾವತಿಸುವಂತೆ ತಿಳಿಸಿದಾಗ ಅನುಮಾನಗೊಂಡು ತನ್ನ ಮನೆಯವರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವುದು ಗೊತ್ತಾಗಿದ್ದು, ಸದ್ಯ ದೂರು ನೀಡಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement