ಪ್ಯಾರಿಸ್: ಫ್ರಾನ್ಸ್ ಪ್ರಧಾನಿ ಗೇಬ್ರಿಯಲ್ ಅಟ್ಟಲ್ ಇಂದು ತಮ್ಮ ರಾಜೀನಾಮೆಯನ್ನು ಘೋಷಿಸಿದ್ದು, ಉತ್ತರಾಧಿಕಾರಿಯನ್ನು ನೇಮಕ ಮಾಡುವವರೆಗೂ ತಮ್ಮ ಕರ್ತವ್ಯಗಳನ್ನು ಮುಂದುವರಿಸುವ ಬಗ್ಗೆ ತಿಳಿಸಿದ್ದಾರೆ. ಭಾನುವಾರದ ಮತದಾನದ ಅಂದಾಜಿನ ಪ್ರಕಾರ, ಎನ್‌ಎಫ್ಪಿ ಬಹುತ್ವವನ್ನು ಗಳಿಸಿದೆ. ಆದರೆ ಸಂಪೂರ್ಣ ಬಹುಮತದ ಕೊರತೆಯಿದ್ದು, ಮ್ಯಾಕ್ರನ್ ಅವರ ಆಡಳಿತ ಪಕ್ಷವು 2ನೇ ಸ್ಥಾನದಲ್ಲಿದೆ. ಇನ್ನು ಬಲಪಂಥೀಯ ನ್ಯಾಷನಲ್ ರ್‍ಯಾಲಿ 3ನೇ ಸ್ಥಾನದಲ್ಲಿದೆ. ಆದಾಗ್ಯೂ, ಜುಲೈ 26 ರಂದು ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭವಾಗುವ ಹಿನ್ನೆಲೆ ಅಧಿಕಾರದಲ್ಲಿ ಮುಂದುವರಿಯಲು ಸಿದ್ಧ ಎಂದು ಅಟ್ಟಾಲ್ ಹೇಳಿದ್ದಾರೆ.
