ಜನರ ಆರೋಗ್ಯದ ದೃಷ್ಟಿಯಿಂದ ಗೋಬಿ ಮಂಚೂರಿಯನ್ ನಲ್ಲಿ ಹಾಕಲಾಗುತ್ತಿದ್ದ ಬಣ್ಣ ಹಾಗೂ ಟೇಸ್ಟಿಂಗ್ ಪೌಡರ್ ಅನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊಡಡಿಸಿದೆ.
ಈ ಹಿನ್ನೆಲೆ ಬೆಂಗಳೂರಿನಾದ್ಯಂತ ಮಾರಾಟ ಗಣನೀಯವಾಗಿ ತಗ್ಗಿದೆ ಎಂದು ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.
ಗೋಬಿ, ಬೇಬೀ ಕಾರ್ನ್ ಮಂಚೂರಿಯನ್, ಫ್ರೈಡ್ ರೈಸ್, ಮಶ್ರೂಮ್ ಫ್ರೈಡ್ ರೈಸ್ ಈ 4 ಐಟಂಗಳಿಗಾಗಿ ಪ್ರತಿನಿತ್ಯ 10 ಸಾವಿರ ರೂ.ಗಳಷ್ಟು ವ್ಯಾಪಾರವಾಗುತ್ತಿತ್ತು.
ಆದರೆ ಸದ್ಯ ಶೇ.80 ವ್ಯಾಪಾರ ಕುಸಿತವಾಗಿದೆ ಎಂದು ವ್ಯಾಪರಿಗಳು ಹೇಳಿದ್ದಾರೆ.