ಬದುಕಿಗೊಂದು ಸ್ಫೂರ್ತಿ ‘ರತನ್‌ ಟಾಟಾ’ ನೀಡಿರುವ ಟಾಪ್‌ 10 ಮಾತುಗಳಿವು..!

ಮುಂಬೈ: ದೇಶ ಕಂಡ ಮಹಾನ್ ಉದ್ಯಮಿ ರತನ್ ಟಾಟಾ ನಮ್ಮನ್ನಗಲಿದ್ದಾರೆ. ಈ ಸುದ್ದಿ ಕೇಳಿ ಭಾರತೀಯರು ಬೆಚ್ಚಿ ಬಿದ್ದಿದ್ದಾರೆ. ಸಾಮಾನ್ಯರು ಮಾತ್ರವಲ್ಲದೇ ರಾಜಕಾರಣಿಗಳು, ಉದ್ಯಮಿಗಳು ಕಣ್ಣೀರಿಟ್ಟಿದ್ದಾರೆ. ಅಪ್ಪಟ ದೇಶಭಕ್ತ ರತನ್ ಟಾಟಾ ಮುಂದಿನ ಪೀಳಿಗೆಗೆ ಯುವಕರಿಗೆ ಸ್ಫೂರ್ತಿಯ ದಾರಿದೀಪವಾಗಿ ನಿಂತ ವ್ಯಕ್ತಿ. ರತನ್‌ ಟಾಟಾ ಹೇಳಿರುವ 10 ಪ್ರಮುಖ ಮಾತುಗಳು ಇಲ್ಲಿವೆ ನೋಡಿ: * ಕಬ್ಬಿಣವನ್ನು ಯಾರೂ ಕೂಡ ನಾಶ ಮಾಡಲು ಸಾಧ್ಯವಿಲ್ಲ. ಆದರೆ, ಅದರಲ್ಲೇ ಹುಟ್ಟುವ ತುಕ್ಕು ಕಬ್ಬಿಣವನ್ನು ನಾಶ ಮಾಡುತ್ತದೆ. ಅದೇ ರೀತಿ ಯಾರೂ ಒಬ್ಬ ವ್ಯಕ್ತಿಯನ್ನು ನಾಶಮಾಡಲು ಸಾಧ್ಯವಿಲ್ಲ. ಆದರೆ ಅವರ ಸ್ವಂತ ಮನಸ್ಥಿತಿ ಅವರನ್ನು ನಾಶ ಮಾಡಬಹುದು. * ಜನರು ನಿಮ್ಮ ಮೇಲೆ ಎಸೆಯುವ ಕಲ್ಲುಗಳನ್ನು ವಿನಮ್ರವಾಗಿ ತೆಗೆದುಕೊಳ್ಳಿ, ಮತ್ತು ಅದೇ ಕಲ್ಲಿನಿಂದ ನಿಮ್ಮ ಇಚ್ಛೆಯ ಸ್ಮಾರಕವನ್ನು ನಿರ್ಮಿಸಿ. * ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ನನಗೆ ನಂಬಿಕೆ ಇಲ್ಲ. ನಾನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ ಮತ್ತು ನಂತರ ಅವುಗಳನ್ನು ಸರಿಯಾಗಿ ಮಾಡುತ್ತೇನೆ. * ‘ಯಾವ ದಿನ ನನಗೆ ಹಾರಲು ಸಾಧ್ಯವಾಗೋದಿಲ್ಲವೋ, ಆ ದಿನ ನನಗೆ ದುಃಖದ ದಿನವಾಗಿರುತ್ತದೆ…’ ವಿಮಾನ ಪ್ರಯಾಣದ ಕುರಿತಾಗಿ ರತನ್‌ ಟಾಟಾ ಹೇಳಿದ ಮಾತು. * ಯಾವುದೇ ಅಪಾಯವನ್ನು ತೆಗೆದುಕೊಳ್ಳದಿರುವುದು ದೊಡ್ಡ ಅಪಾಯ. ಕ್ಷಿಪ್ರವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ, ಸೋಲು ಕಾಣುವ ಏಕೈಕ ಮಾರ್ಗ ಎಂದರೆ ಅಪಾಯಗಳನ್ನು ತೆಗೆದುಕೊಳ್ಳದಿರುವುದು. * ‘ಬದುಕಿನ ಕೊನೆಯಲ್ಲಿ, ನಾವು ತೆಗೆದುಕೊಳ್ಳದ ಅವಕಾಶಗಳಿಗೆ ಮಾತ್ರ ನಾವು ವಿಷಾದಪಡುತ್ತೇವೆ..’ ಸಂದರ್ಶನವೊಂದರಲ್ಲಿ ಬದುಕಿನ ಬಗ್ಗೆ ಹೇಳಿದ ಮಾತು. * ಜೀವನದಲ್ಲಿ ಏರಿಳಿತಗಳು ನಮ್ಮನ್ನು ಮುಂದುವರಿಸಲು ಬಹಳ ಮುಖ್ಯ ಏಕೆಂದರೆ ಇಸಿಜಿಯಲ್ಲಿಯೂ ಸಹ ಸರಳ ರೇಖೆಯು ನಾವು ಜೀವಂತವಾಗಿಲ್ಲ ಎಂದೇ ತೋರಿಸುತ್ತದೆ. * ನಾನು ಯಾವಾಗಲೂ ಭಾರತದ ಭವಿಷ್ಯದ ಬಗ್ಗೆ ತುಂಬಾ ಆತ್ಮವಿಶ್ವಾಸ ಮತ್ತು ಲವಲವಿಕೆಯಿಂದ ಇದ್ದೇನೆ. ದೇಶದ ಶಕ್ತಿ ನನಗೆ ಗೊತ್ತು.. * ನಾನು ಕೆಲಸ-ಜೀವನದ ಸಮತೋಲನವನ್ನು ನಂಬುವುದಿಲ್ಲ. ನಾನು ಕೆಲಸ-ಜೀವನದ ಏಕೀಕರಣವನ್ನು ನಂಬುತ್ತೇನೆ. ನಿಮ್ಮ ಕೆಲಸ ಮತ್ತು ಜೀವನವನ್ನು ಅರ್ಥಪೂರ್ಣ ಮತ್ತು ಪೂರೈಸುವಂತೆ ಮಾಡಿ ಮತ್ತು ಅವು ಪರಸ್ಪರ ಪೂರಕವಾಗಿರುತ್ತವೆ. * ಸಮಗ್ರತೆ, ಬದ್ಧತೆ ಇರುವ ವ್ಯಕ್ತಿಯಾಗಿ ಬದುಕಿ. ಜೀವನದಲ್ಲಿ ಯಾವಾಗಲೂ ಸರಿಯಾದದ್ದನ್ನು ಮಾಡಲು ಪ್ರಯತ್ನ ಮಾಡಿ ಅದು ಕಷ್ಟವಾಗಿದ್ದರೂ ಸಹ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement