ಬೆಂಗಳೂರು: ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಏಳು ಚಿರತೆ ಮರಿಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬನ್ನೇರುಘಟ್ಟದಲ್ಲಿರುವ ಚಿರತೆ ಮರಿಗಳಿಗೆ ಫೆಲಿನ್ ಪ್ಯಾನ್ಲೂಕೋಪೇನಿಯಾ (Feline panleukopenia-FP) ಎಂಬ ಮಾರಕ ವೈರಸ್ ಗೆ ತುತ್ತಾಗಿದ್ದರಿಂದ ಆಗಸ್ಟ್ 22ರಿಂದ ಸೆಪ್ಟೆಂಬರ್ 5ರ ನಡುವೆ ಏಳು ಚಿರತೆ ಮರಿಗಳು ಪ್ರಾಣ ಕಳೆದುಕೊಂಡಿದ್ದವು. ಫೆಲೈನ್ ಪ್ಯಾನ್ಲ್ಯುಕೋಪೆನಿಯಾ (ಎಫ್‌ಪಿ) ಬೆಕ್ಕಿನ ಪಾರ್ವೊವೈರಸ್‌ನಿಂದ ಉಂಟಾಗುವ ಬೆಕ್ಕುಗಳ ವೈರಲ್ ಕಾಯಿಲೆಯಾಗಿದೆ.
ಅಧಿಕಾರಿಗಳ ಪ್ರಕಾರ, ಮೊದಲ ಪ್ರಕರಣ ಏಕಾಏಕಿ ಆಗಸ್ಟ್ 22 ರಂದು ವರದಿಯಾಗಿತ್ತು. ಏಳು ಮರಿಗಳು ಮೂರರಿಂದ ಎಂಟು ತಿಂಗಳ ವಯಸ್ಸಿನವು. ಅವರೆಲ್ಲರಿಗೂ ಲಸಿಕೆ ಹಾಕಲಾಯಿತು ಆದರೆ ಚಿಕಿತ್ಸೆಯ ಸಮಯದಲ್ಲಿ ಅವುಗಳು ಸಾವನ್ನಪ್ಪಿತ್ತು.
ಇದೀಗ ಮುನ್ನೆಚ್ಚರಿಕಾ ಕ್ರಮವಾಗಿ ಚಿರತೆ ಮಾತ್ರವಲ್ಲ ಹುಲಿ, ಸಿಂಹ ಸೇರಿದಂತೆ ಎಲ್ಲಾ ಪಂಜರಗಳಿಗೆ ಬೆಂಕಿಯಿಂದ ಬರ್ನಿಂಗ್ ಮಾಡಿ, ಬ್ಲೀಚಿಂಗ್ ಪೌಡರ್, ಔಷಧಿ ಸಿಂಪಡಣೆ ಮಾಡಿ ಸ್ವಚ್ಛಗೊಳಿಸಲಾಗಿದೆ