ಚೆನ್ನೈ: ಈಗಾಗಲೇ ಬಿಳಿ ಮತ್ತು ನೀಲಿ ಬಣ್ಣದ ವಂದೇ ಭಾರತ್ ಹೈಸ್ಪೀಡ್ ರೈಲುಗಳು ದೇಶದ ಹಲವೆಡೆ ಸಂಚರಿಸುತ್ತಿವೆ. ಬರುವ ದಿನಗಳಲ್ಲಿ ಕೇಸರಿ ಬಣ್ಣದ ವಂದೇ ಭಾರತ್ ರೈಲು ಓಡಾಡಲಿದೆ.
ಕರ್ನಾಟಕದಲ್ಲಿ ತಲೆ ಎತ್ತಲಿದೆ ವಿಶ್ವದ ಅತೀ ಎತ್ತರದ ಬಾಲಸುಬ್ರಹ್ಮಣ್ಯ ಮೂರ್ತಿ
ಇದು ವಂದೇ ಭಾರತ್ ಎಕ್ಸ್‌ಪ್ರೆಸ್ ಹೈ ಸ್ಪೀಡ್ ರೈಲಿನ 28ನೇ ಆವೃತ್ತಿಯಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ಕೇಸರಿ ವರ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇನ್ನೂ ಕಾರ್ಯಾಚರಣೆಗೆ ಇಳಿದಿಲ್ಲ. ಅದು ಪ್ರಸ್ತುತ ವಂದೇ ಭಾರತ್ ರೈಲುಗಳು ತಯಾರಾಗುವ ತಮಿಳುನಾಡಿನ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ಐಸಿಎಫ್) ಸಿದ್ಧವಾಗಿ ನಿಂತಿದೆ. ಇದುವರೆಗಿನ ರೈಲುಗಳು ಬಿಳಿ ಹಾಗೂ ನೀಲಿ ಬಣ್ಣವನ್ನು ಹೊಂದಿದ್ದವು. ಈ ಹೊಸ ರೈಲು ಬಿಳಿ ಮತ್ತು ಕೇಸರಿ ಬಣ್ಣ ಹೊಂದಿದೆ.