ಬೆಂಗಳೂರು: ಇಲ್ಲಿನ ಕಾಡುಗೋಡಿ ಬಳಿಯ ಬೆಲತ್ತೂರಿನಲ್ಲಿ ಶನಿವಾರ ಹೀಲಿಯಂ ಗ್ಯಾಸ್ ತುಂಬಿದ್ದ ಬಲೂನ್ ಬ್ಲಾಸ್ಟ್ (Balloon blast) ಆಗಿದೆ. ಈ ಅವಘಡದಲ್ಲಿ ಐವರು ಗಂಭೀರ ಗಾಯಗೊಂಡಿದ್ದಾರೆ. ವಿಜಯ್ ಕುಮಾರ್ (44), ಧ್ಯಾನ್(7) , ಸಂಜಯ್(8), ಸೋಹಿಲಾ (3) ಗಾಯಾಳುಗಳು.
ಹುಟ್ಟುಹಬ್ಬದ ಪ್ರಯುಕ್ತ ಹೀಲಿಯಂ ಗ್ಯಾಸ್ ತುಂಬಿಸಿದ್ದ ಬಲೂನ್ ಬಳಸಲಾಗಿತ್ತು. ಈ ವೇಳೆ ಮನೆಯ ಮುಂದಿನ ವಿದ್ಯುತ್ ತಂತಿಗೆ ತಾಗಿ ಒಮ್ಮೆಲೆ ಬಲೂನ್ ಬ್ಲಾಸ್ಟ್ ಆಗಿದೆ. ಬಲೂನ್ ಅಕ್ಕಪಕ್ಕದಲ್ಲಿದ್ದ ಮೂವರು ಮಕ್ಕಳು ಸೇರಿ ವ್ಯಕ್ತಿಗೆ ಗಂಭೀರ ಗಾಯವಾಗಿದೆ.
ಮಕ್ಕಳ ಮುಖ ಸೇರಿ ಕೈ-ಕಾಲುಗಳು ಸುಟ್ಟು ಹೋಗಿವೆ. ವ್ಯಕ್ತಿಯ ಮುಖಕ್ಕೆ ಬಲೂನ್ ಸ್ಫೋಟಗೊಂಡಿದ್ದರಿಂದ ಚರ್ಮವೆಲ್ಲ ಸುಟ್ಟು ಹೋಗಿದೆ. ಗಾಯಗೊಂಡು ನರಳಾಡುತ್ತಿದ್ದವರನ್ನು ಕೂಡಲೇ ವಿಕ್ಟೋರಿಯಾದ ಸುಟ್ಟಗಾಯ ವಾರ್ಡ್‌ಗೆ ರವಾನಿಸಲಾಗಿದೆ. ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಡಿಸಿಪಿ ಸಂಜೀವ್ ಎಂ ಪಾಟೀಲ್ ಮಾಹಿತಿ ನೀಡಿದ್ದಾರೆ. ನಿನ್ನೆ ಶನಿವಾರ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳತ್ತೂರ ಮನೆಯೊಂದರಲ್ಲಿ ಬಲೂನ್ ಸ್ಫೋಟಗೊಂಡಿದೆ. ಬಾಲಕಿಯೊಬ್ಬಳ ಹುಟ್ಟು ಹಬ್ಬ ಹಿನ್ನೆಲೆ ಬಲೂನ್‌ಗಳಿಗೆ ಗ್ಯಾಸ್ ತುಂಬಿಸಿ ಸಂಭ್ರಮ ಆಚರಣೆಗೆ ಬಳಸಲಾಗುತ್ತಿತ್ತು. ಈ ಬಲೂನ್‌ಗಳನ್ನು ಬರ್ತ್‌ಡೇ ಸ್ಥಳಕ್ಕೆ ತೆಗೆದುಕೊಂಡು ಹೋಗಲು ಮೆಟ್ಟಿಲು ಹತ್ತುವಾಗ, ಮನೆಯ ಮುಂದಿನ ವಿದ್ಯುತ್ ತಂತಿಗೆ ತಾಗಿ ಬೆಂಕಿ ಅವಘಡ ಸಂಭವಿಸಿದೆ. ಈ ಬೆಂಕಿಯಿಂದ ನಾಲ್ವರು ಮಕ್ಕಳು ಸೇರಿದಂತೆ ಐದು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.