ಚಿತ್ರದುರ್ಗ : ಐತಿಹಾಸಿಕ ನಗರ ಚಿತ್ರದುರ್ಗ ಜಿಲ್ಲೆಯನ್ನು ಅಂತಾರಾಷ್ಟ್ರಿಯ ಮಟ್ಟದಲ್ಲಿ ಗುರುತಿಸುವಂತಾಗಲೆAಬ ಮಹತ್ವಾಕಾಂಕ್ಷೆಯೊAದಿಗೆ ಶ್ರೀ ಮುರುಘಾಮಠದಿಂದ ಅನುಷ್ಠಾನಗೊಳ್ಳುತ್ತಿರುವ ಬಸವ ಪುತ್ಥಳಿ ನಿರ್ಮಾಣ ಯೋಜನೆಯಲ್ಲಿ ಯಾವುದೇ ಹಣದ ದುರುಪಯೋಗ ಆಗಿರುವುದಿಲ್ಲ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ಸ್ಪಷ್ಟಪಡಿಸಿದರು.
ಶ್ರೀಮಠದಲ್ಲಿ ಶುಕ್ರವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಚಿತ್ರದುರ್ಗ ಜಿಲ್ಲೆಯ ಅಭಿವೃದ್ಧಿಗಾಗಿ ಮುರುಘಾ ಶರಣರು 220 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಐತಿಹಾಸಿಕ ಚಿತ್ರದುರ್ಗ ಅಂತಾರಾಷ್ಟ್ರಿಯ ಪ್ರವಾಸಿ ತಾಣಗಳಲ್ಲೊಂದಾಗಬೇಕು ಅದರೊಟ್ಟಿಗೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಬೇಕೆಂಬುದು ಶ್ರೀಗಳವರ ಆಶಯವಾಗಿದೆ. ಆದರೆ ಹಿರಿಯ ರಾಜಕಾರಣಿಯೊಬ್ಬರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಹಾಗೆಯೇ ಜಿಲ್ಲಾಡಳಿತ ಐವರ ಸಮಿತಿ ರಚಿಸಿದೆ. ತಪಾಸಣೆಗೆ ಬರುವ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಕಳೆದ ಒಂದು ವರ್ಷದಿಂದ ಕಾರಣಾಂತರಗಳಿಂದ ಪುತ್ಥಳಿ ಕಾಮಗಾರಿ ನಿಂತಿದ್ದು, ಈಗ ಮತ್ತೆ ಚಾಲನೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಕೆ.ಸಿ. ನಾಗರಾಜ್, ಜಿತೇಂದ್ರ ಎನ್.ಹುಲಿಕುಂಟೆ ಗೋಷ್ಠಿಯಲ್ಲಿದ್ದರು.