ಬಾಂಬ್​ನ್ನು ಬಾಲ್​​ ಎಂದು ಗೋಡೆಗೆ ಎಸೆದ 7 ವರ್ಷದ ವಿದ್ಯಾರ್ಥಿ ಮೃತ್ಯು

ದೌಲತಾಬಾದ್: ಪಶ್ಚಿಮ ಬಂಗಾಳದ ಮುರ್ಷಿಬಾದ್​​​ನ ಶಾಲೆಯೊಂದರ ಬಳಿ ಗುರುವಾರ ಮಧ್ಯಾಹ್ನ ಊಟದ ವೇಳೆ ಬಾಂಬ್‌ ಸ್ಫೋಟಗೊಂಡು ವಿದ್ಯಾರ್ಥಿ ಸಾವನ್ನಪ್ಪಿದ್ದ ಘಟನೆ ವರದಿಯಾಗಿದೆ.

ಸ್ಫೋಟದಿಂದ ಮೃತಪಟ್ಟವರು ೨ನೇ ತರಗತಿ ವಿದ್ಯಾರ್ಥಿನಿ ಮಕ್ಲೇಸೂರ್​​ ರೆಹಮಾನ್​​​​ (7) ಎಂದು ಗುರುತಿಸಲಾಗಿದೆ. ಇನ್ನು ಘಟನೆಯಲ್ಲಿ ಅನೇಕರಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.ದೌಲತಾಬಾದ್ ಪೊಲೀಸ್​​​ ಠಾಣೆ ಬಳಿ ಈ ಘಟನೆ ನಡೆದಿದೆ.

ಪೊಲೀಸರು ಹಾಗೂ ಸ್ಥಳೀಯ ಪ್ರಕಾರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟ ಮಾಡಿ ಹೊರಗಡೆ ಬರಬೇಕಾದರೆ ಚೆಂಡಿನಂತಿರುವ ಬಾಂಬ್​​ಕೈಯಲ್ಲಿ ಹಿಡಿದು, ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಈ ವೇಳೆ ರೆಹಮಾನ್​​​​ ಚೆಂಡಿನಂತಿರುವ ಬಾಂಬ್ ಗೋಡೆ ಎಸೆದಿದ್ದಾನೆ, ಈ ವೇಳೆ ಬಾಂಬ್​ಸ್ಫೋಟಗೊಂಡಿದೆ. ಈ ವೇಳೆ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Advertisement

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನು ಬಾಲಕನ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.ಇನ್ನು ಪೋಷಕರು ಶಾಲಾ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆಯಲ್ಲಿ ಬಾಂಬ್​​​​ ಹೇಗೆ ಬಂತು, ಯಾರು ತಂದಿರುವುದು, ಮಕ್ಕಳ ಬಗ್ಗೆ ಶಾಲಾ ಶಿಕ್ಷಕರು ಕಾಳಜಿ ವಹಿಸಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದು, ಗಾಯಾಳು ವಿದ್ಯಾರ್ಥಿಗಳಲ್ಲಿ ಮೂವರ ಪರಿಸ್ಥಿತಿ ಗಂಭೀರವಾಗಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement