ಬೆಂಗಳೂರು: ಇಂಧನ ಇಲಾಖೆಯು ಗೃಹಜ್ಯೋತಿಯ ಫಲಾನುಭವಿಗಳು ಬಾಡಿಗೆ ಮನೆ ಅಥವಾ ಮನೆ ಬದಲಾಯಿಸಿದ ಬಳಿಕವೂ ಗೃಹಜ್ಯೋತಿ ಯೋಜನೆಯ ಪ್ರಯೋಜನವನ್ನು ಪಡೆಯಲು ಅವಕಾಶ ಕಲ್ಪಿಸಿದೆ.
ಸೇವಾಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಂಡಿದ್ದ ಗೃಹಜ್ಯೋತಿ ಫಲಾನುಭವಿಗಳಿಗೆ ಡಿಲಿಂಕ್ ಮಾಡುವ ಅವಕಾಶ ಇರಲಿಲ್ಲ. ಇದೀಗ ಸರಕಾರ ಡಿಲಿಂಕ್‌ಗೆ ಕೂಡ ಅವಕಾಶ ಕಲ್ಪಿಸಿದೆ.
ಗ್ರಾಹಕರು ತಮ್ಮ ಮನೆಯನ್ನು ಬದಲಾಯಿಸಿದಂತಹ ಸಂದರ್ಭ ಅಥವಾ ಇತರ ಸಂದರ್ಭ ಈಗಾಗಲೇ ಯೋಜನೆಯ ಸೌಲಭ್ಯ ಪಡೆಯುತ್ತಿರುವ ಸ್ಥಾವರದಿಂದ ಸ್ಥಗಿತಗೊಳಿಸಿ ಮತ್ತೂಂದು ಸ್ಥಾವರಕ್ಕೆ ಹೊಸದಾಗಿ ನೋಂದಾಯಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯುತ್ ನಿಗಮಗಳು ಕ್ರಮ ಕೈಗೊಳ್ಳಬೇಕು ಇಂಧನ ಇಲಾಖೆಯು ಸೂಚಿಸಿದೆ.