ಸಿನಿಮಾ, ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಬಾಲನಟ ನಟಿಯಾಗಿ ನಟಿಸಲು ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಾಗಿ ಬೇಕಾಗಿದೆ. ಕಾರ್ಮಿಕ ಇಲಾಖೆ ಆಯುಕ್ತರಿಂದ ಖಡಕ್ ಆದೇಶ ಮಾಡಲಾಗಿದೆ.
ಒಂದು ವೇಳೆ ಈ ಆದೇಶ ಪಾಲಿಸದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು. ಆಯೋಜಕರು, ನಿರ್ಮಾಪಕರು ಅನುಮತಿ ಪಡೆಯಲು ಆದೇಶ ನೀಡಲಾಗಿದೆ. ಶೂಟಿಂಗ್ನಲ್ಲಿ 5 ಗಂಟೆಗೂ ಹೆಚ್ಚು ಕಾಲ ಮಕ್ಕಳನ್ನು ಬಳಸುವ ಹಾಗಿಲ್ಲ. ಅಷ್ಟೇ ಅಲ್ಲದೇ, 27 ದಿನಗಳ ವರೆಗೆ ಮಕ್ಕಳನ್ನು ಶೂಟಿಂಗ್ಗೆ ಬಳಸಬಾರದು ಎಂದು ಆದೇಶ ಮಾಡಲಾಗಿದೆ.