ಬಾಲಿವುಡ್ ‘ನಟ ರವೀಂದ್ರ ಬೆರ್ಡೆ’ ಇನ್ನಿಲ್ಲ

ಮುಂಬೈ: ಮರಾಠಿ ಹಾಗೂ ಹಿಂದಿ ಚಿತ್ರರಂಗದ ಜನಪ್ರಿಯ ಹೆಸರು ರವೀಂದ್ರ ಬೆರ್ಡೆ 78ನೇ ವಯಸ್ಸಿನಲ್ಲಿ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಹಲವು ವರ್ಷಗಳಿಂದ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದರು.

ಕಳೆದ ಕೆಲ ದಿನಗಳ ಹಿಂದೆ ಉಸಿರಾಟದ ತೊಂದರೆಯಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನಗಳ ಹಿಂದೆಯಷ್ಟೇ ಡಿಸ್ಚಾರ್ಜ್ ಆಗಿದ್ದರು. ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಹೃದಯಾಘಾತವಾಗಿ ಇಹಲೋಕ ತ್ಯಜಿಸಿದ್ದಾರೆ.

ಬೆರ್ಡೆ ಅವರು ಅನಿಲ್ ಕಪೂರ್ ಮತ್ತು ಅಜಯ್ ದೇವಗನ್ ಸೇರಿದಂತೆ ಹಲವಾರು ಜನಪ್ರಿಯ ಬಾಲಿವುಡ್ ನಟರೊಂದಿಗೆ ಕ್ರಮವಾಗಿ ನಾಯಕ್, ದಿ ರಿಯಲ್ ಹೀರೋ ಮತ್ತು ಸಿಂಗಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ಇದಲ್ಲದೆ, ಅವರು ಅಶೋಕ್ ಸರಾಫ್, ವಿಜಯ್ ಚವಾಣ್, ವಿಜೂ ಖೋಟೆ ಮತ್ತು ಮಹೇಶ್ ಕೊಠಾರೆ ಮುಂತಾದ ಜನಪ್ರಿಯ ಹೆಸರುಗಳೊಂದಿಗೆ 300 ಕ್ಕೂ ಹೆಚ್ಚು ಮರಾಠಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

Advertisement

1995 ರಲ್ಲಿಯೂ ಇವರು ಹೃದಯಾಘಾತಕ್ಕೆ ಒಳಗಾಗಿದ್ದರು. 2011 ರಲ್ಲಿ, ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಆದರೆ ಅದರ ನಡುವೆಯೂ ಅವರು ಪ್ರೇಕ್ಷಕರನ್ನು ರಂಜಿಸುವುದನ್ನು ಮುಂದುವರೆಸಿದರು. ರವೀಂದ್ರ ಅವರ ಹಾಸ್ಯ ಪಾತ್ರಗಳು ಬಹಳ ಜನಪ್ರಿಯವಾಗಿದ್ದವು.

ರವೀಂದ್ರ ಬೆರ್ಡೆ ಅವರು ಪತ್ನಿ, ಇಬ್ಬರು ಮಕ್ಕಳು, ಸೊಸೆ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement