ಚಿಕ್ಕಮಗಳೂರು : ಬಾಳೆಹಣ್ಣಿಗೆ ಜ್ಞಾನ ತಪ್ಪುವ ಔಷಧವಿಟ್ಟು 30 ಮಂಗಗಳನ್ನು ಕೊಂದ ಅಮಾನುಷ ಘಟನೆ ನಡೆದಿದೆ. 16 ಗಂಡು, 14 ಹೆಣ್ಣು, 4 ಮರಿಗಳ ಮಾರಣ ಹೋಮ ನಡೆದಿದೆ. 30 ಮಂಗಗಳನ್ನು ಕೊಂದು ರಸ್ತೆಗೆ ತಂದು ಎಸೆದು ಹೋಗಿದ್ದಾರೆ. ಎನ್.ಆರ್.ಪುರ ತಾಲೂಕಿನ ದ್ಯಾವಣ ಬಳಿ ಈ ಮನಕಲುಕುವ ಘಟನೆ ನಡೆದಿದೆ. ಮಂಗಗಳು ಜ್ಞಾನ ತಪ್ಪಿದ ಬಳಿಕ ತಲೆಗೆ ಹೊಡೆದು ಸಾಯಿಸಲಾಗಿದೆ. 30 ಮಂಗಗಳ ತಲೆಯಲ್ಲೂ ಒಂದೇ ರೀತಿ ಗಾಯವಾಗಿದ್ದು, ರಕ್ತಸುರಿದು ಮೃತಪಟ್ಟಿವೆ. ಸ್ಥಳಕ್ಕೆ ಡಿ.ಎಫ್.ಓ, ಆರ್.ಎಫ್.ಓ, ಪಿ.ಎಸ್.ಐ. ಪಶುಸಂಗೋಪನೆ, ಪಶುವೈದ್ಯ, ಪಂಚಾಯಿತಿ, ಆಶಾಕಾರ್ಯರ್ತೆಯರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಂಗಗಳ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಂಗಗಳ ಮಾರಣ ಹೋಮಕ್ಕೆ ಪ್ರಾಣಿ ಪ್ರಿಯರು ಕಿಡಿ ಕಾರಿದ್ದಾರೆ.
