ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯು ಸೂರ್ಯನ ಅಧ್ಯಯನಕ್ಕಾಗಿ ಕಳುಹಿಸಿರುವ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆ ಬಾಹ್ಯಾಕಾಶದಿಂದ ಸೆಲ್ಫಿ ಹಂಚಿಕೊಂಡಿದ್ದು ಇದು ಭೂಮಿ, ಚಂದ್ರನನ್ನು ಸೆರೆಹಿಡಿದಿದೆ.
ಈ ಕುರಿತು ಇಸ್ರೋ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯು ಲ್ಯಾಗ್ರೇಂಜ್ ಪಾಯಿಂಟ್ 1 ಗೆ ಪ್ರಯಾಣಿಸುವ ಮೊದಲು ಗ್ರಹದ ಸುತ್ತಲೂ ಸುತ್ತುತ್ತಿರುವಾಗ ಸೆಲ್ಫಿಯೊಂದಿಗೆ ಭೂಮಿ ಮತ್ತು ಸೂರ್ಯನನ್ನು ಸೆರೆಹಿಡಿದಿದೆ.
ಭಾರತದ ಮೊದಲ ಸೌರ ಬಾಹ್ಯಾಕಾಶ ವೀಕ್ಷಣಾಲಯ ಮಿಷನ್ ಆದಿತ್ಯ-ಎಲ್ 1 ಭೂಮಿಯಿಂದ ಯಶಸ್ವಿಯಾಗಿ ಪ್ರಯಾಣ ಆರಂಭಿಸಿದ್ದು ನಾಲ್ಕು ತಿಂಗಳುಗಳ ಬಳಿಕ ತನ್ನ ನಿಗದಿತ ಕಕ್ಷೆಗೆ ತಲುಪಲಿದೆ. ಸೂರ್ಯ ನಿಂದ 148.5 ಮಿಲಿಯನ್ ಕಿಲೋ ಮೀಟರ್ ಮತ್ತು ಭೂಮಿಯಿಂದ 15 ಲಕ್ಷ ಕಿಲೋ ಮೀಟರ್ ದೂರದಲ್ಲಿರುವ L1ಪಾಯಿಂಟ್ ತಲುಪಲು ಈ ನೌಕೆಗೆ ಇನ್ನು ನಾಲ್ಕು ತಿಂಗಳುಗಳ ಕಾಲ ಬೇಕು.