ಚೆನ್ನೈ: ತಮಿಳುನಾಡು ಸರ್ಕಾರವು ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತ ಸಂದೀಪ್ ರೈ ರಾಥೋಡ್ ಅವರನ್ನು ಸೋಮವಾರ ವರ್ಗಾವಣೆ ಮಾಡಿದೆ. ಸಂದೀಪ್ ರೈ ರಾಥೋಡ್ ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಎ ಅರುಣ್ ನೇಮಕಗೊಂಡಿದ್ದಾರೆ. ತಮಿಳುನಾಡು ಬಿಎಸ್‌ಪಿ ಮುಖ್ಯಸ್ಥ ಕೆ ಆರ್ಮ್‌ಸ್ಟ್ರಾಂಗ್ ಅವರನ್ನು ಬೈಕ್‌ನಲ್ಲಿ ಬಂದ ಆರು ಮಂದಿ ಚೆನ್ನೈನಲ್ಲಿ ಅವರ ಮನೆಯ ಸಮೀಪ ಮಾರಕಾಯುಧಗಳಿಂದ ಕೊಂದ ಬೆನ್ನಲ್ಲೇ ಸಂದೀಪ್ ರೈ ರಾಥೋಡ್ ಅವರನ್ನು ವರ್ಗಾವಣೆ ಮಾಡಲಾಗಿದೆ. ರಾಥೋಡ್ ಅವರನ್ನು ಈಗ ಚೆನ್ನೈನ ಪೊಲೀಸ್ ತರಬೇತಿ ಕಾಲೇಜಿನ ಡಿಜಿಪಿಯಾಗಿ ನೇಮಿಸಲಾಗಿದೆ.
