ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮೇಲೆ ಮಹಿಳೆಯೊಬ್ರು ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರು ದಾಖಲಿಸಿದ್ದಾರೆ.
ಇನ್ನೂ ದೂರು ನೀಡಿರೋ ಮಹಿಳೆ ಇದೇ ಮೊದಲ ಬಾರಿಗೆ ಠಾಣೆ ಮೆಟ್ಟಿಲೇರಿಲ್ಲ. ಈ ಹಿಂದೆ ಹಿರಿಯ ಐಪಿಎಸ್ ಅಧಿಕಾರಿಗಳಾದ ಭಾಸ್ಕರ್ ರಾವ್, ಅಲೋಕ್ ಕುಮಾರ್ , ಹಿರಿಯ ರಾಜಕಾರಣಿ ಉಗ್ರಪ್ಪ ಸೇರಿದಂತೆ ಹಲವು ಉದ್ಯಮಿಗಳು ಮತ್ತು ವ್ಯಕ್ತಿಗಳ ಮೇಲೆ ಈ ಮಹಿಳೆ ದೂರು ನೀಡಿದ್ದಾರೆ.
ಈ ಹಿಂದೆ ಬಿಎಸ್ ವೈ ಮನೆಗೆ ಸಹಾಯ ಕೇಳಿಕೊಂಡು ಹೋದಾಗ ಬಿಎಸ್ ಯಡಿಯೂರಪ್ಪ ಖುದ್ದು ಕಮಿಷನರ್ ಗೆ ಕಾಲ್ ಮಾಡಿ ಈ ಮಹಿಳೆಗೆ ಸಹಾಯ ಮಾಡಿ ಅವರಿಗೆ ಅನ್ಯಾಯ ಆಗಿದೆ ಎಂದು ಫೋನ್ ಮೂಲಕ ಕಮಿಷನರ್ ಗೆ ಮಾತನಾಡಿದ್ದಾರೆ. ಇನ್ನೂ ಈ ಮಹಿಳೆ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರ ಬಳಿ ಸಹಾಯ ಕೇಳಿಕೊಂಡು ಹೋದಾಗ ಅವರಿಂದ ಸಹಾಯ ಆಗದಿದ್ರೆ ಈ ರೀತಿ ಅವರ ಮೇಲೆ ದೂರು ದಾಖಲಿಸಿದ್ದಾರೆ ಎಂದು ಹೇಳಲಾಗ್ತಿದೆ.
ಅದೇನೆ ಆಗಿದ್ರು ಒಬ್ಬ ಪ್ರಭಾವಿ ಮತ್ತು ಜನಪ್ರಿಯ ಜನನಾಯಕನ ಮೇಲೆ ಉದ್ದೇಶ ಪೂರ್ವಕವಾಗಿ ಸುಳ್ಳು ದೂರು ದಾಖಲಿಸಿದ್ರೆ ಆಕೆಯ ಮೇಲೆ ಕಾನೂನಿನ ಕ್ರಮ ಆಗಲೇ ಬೇಕು. ಇಲ್ಲ ಜನನಾಯಕರೇ ತಪ್ಪು ಮಾಡಿರೋದು ಸಾಭೀತಾದ್ರೆ ಅವರ ಮೇಲೂ ಕಾನೂನು ಕ್ರಮ ಆಗಲಿದಿಯಾ ಕಾದುನೋಡಬೇಕಿದೆ.