ಬೆಂಗಳೂರು : ಬಿಗ್ಬಾಸ್ ಅಂದ್ರೆ ವಿವಾದ, ವಿವಾದ ಅಂದ್ರೆ ಬಿಗ್ಬಾಸ್ ಎನ್ನುವಷ್ಟು ಫೇಮಸ್ ಆಗಿದೆ ಈ ಶೋ.
ಈ ಕಾರ್ಯಕ್ರಮ ಮೊದಲ ದಿನದಿಂದಲೂ ವಿವಾದಗಳನ್ನು ಹುಟ್ಟುಹಾಕುತ್ತಾ ಬಂದಿದೆ. ಇದು ಪ್ರತಿ ಸೀಸನ್ನಲ್ಲೂ ಮುಂದುವರಿದರೂ ಪ್ರಸ್ತುತ ತಮಿಳಿನ ಬಿಗ್ಬಾಸ್ ಸೀಸನ್ನಲ್ಲಿ ಹಲವು ವಿವಾದಗಳು ಎದ್ದಿವೆ. ಮನೆಯನ್ನು ಎರಡು ಭಾಗಗಳಾಗಿ ವಿಂಗಡಿಸಿದ ತಮಿಳು ಬಿಗ್ ಬಾಸ್ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕ ತಂಡಗಳನ್ನಾಗಿ ಮಾಡಿದೆ. ಇದೇ ಸಂದರ್ಭದಲ್ಲಿ ನಿನ್ನೆ ನಡೆದ ಘಟನೆ ಟೀಕೆಗೆ ಗುರಿಯಾಗಿದೆ.
ಅದೇನೆಂದರೆ, ನಿನ್ನೆ ಪುರುಷರ ತಂಡ ನಮ್ಮ ನಿಯಂತ್ರಣದಲ್ಲಿರುವ ಸ್ಥಳಕ್ಕೆ ಮಹಿಳೆಯರು ಬರಬೇಕಾದರೆ ನಮ್ಮಿಂದ ಅನುಮತಿ ಪಡೆಯಬೇಕು ಎಂದು ಹೇಳಿದ್ದರು. ಪುರುಷ ಸ್ಪರ್ಧಿಗಳು ಎಲ್ಲರೂ ಕುಳಿತು ಮಾತನಾಡುತ್ತಿದ್ದ ವೇಳೆ ಯಾರೂ ಇಲ್ಲದ ಕಾರಣ ಅನುಮತಿ ಕೇಳದೆ ಮಹಿಳಾ ಸ್ಪರ್ಧಿ ಜಾಕ್ವೆಲಿನ್, ಅಡುಗೆ ಕೋಣೆಗೆ ಹೋಗಿ ಪಾತ್ರೆ ತೊಳೆಯುವ ಲಿಕ್ವಿಡ್ ಅನ್ನು ಕದ್ದೊಯ್ದು ಮಹಿಳೆಯರ ಬಾತ್ರೂಮ್ನಲ್ಲಿ ಬಚ್ಚಿಟ್ಟು ನಿಯಮ ಉಲ್ಲಂಘಿಸಿದರು. ಇದನ್ನು ನೋಡಿದ ಪುರುಷರ ತಂಡ, ಲಿಕ್ವಿಡ್ ಅನ್ನು ತಂದು ಕೊಡುವಂತೆ ಹೇಳಿದರು. ಆದರೆ, ಜಾಕ್ವೆಲಿನ್ ಅರ್ಧದಷ್ಟು ಕಪ್ ಸುರಿದುಕೊಂಡು ಇನ್ನರ್ಧ ಕೊಟ್ಟಳು. ಜಾಕ್ವೆಲಿನ್ ಚಟುವಟಿಕೆಯನ್ನು ಜೆಫ್ರಿ ವೀಕ್ಷಿಸುತ್ತಿದ್ದರು. ಅದನ್ನು ಗಮನಿಸಿದ ಜಾಕ್ವೆಲಿನ್, ನಮ್ಮ ಬಾತ್ರೂಮ್ ಕಡೆ ಯಾಕೆ ಇಣುಕಿ ನೋಡುತ್ತಿದ್ದೀರಿ? ನೀವು ತುಂಬಾ ತಪ್ಪು ಮಾಡುತ್ತಿದ್ದೀರಿ ಎಂದು ಗದರಿದರು. ಅಲ್ಲದೆ, ಸ್ಪರ್ಧಿ ಸೌಂದರ್ಯ ಕೂಡ ನಾಮಿನೇಷನ್ ಸಮಯದಲ್ಲಿ ಜೆಫ್ರಿ, ತುಂಬಾ ಕೆಟ್ಟದಾಗಿ ವರ್ತಿಸುತ್ತಾರೆ ಎಂದು ಹೇಳಿ ನಾಮಿನೇಟ್ ಮಾಡಿದರು. ಶೋನಲ್ಲಿ ಸ್ವಲ್ಪ ಸೆನ್ಸೇಷನ್ ಕ್ರಿಯೇಟ್ ಮಾಡಲು ಜಾಕ್ವೆಲಿನ್ ಸುಖಾ ಸುಮ್ಮನೇ ಈ ರೀತಿ ಮಾಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ವಿವಾದದ ಕುರಿತು ವಿಜಯ್ ಸೇತುಪತಿ ಯಾವ ರೀತಿ ಮಾತನಾಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.