ಬಿಗ್ಬಾಸ್ ಮೂಲಕ ಖ್ಯಾತಿ ಪಡೆದುಕೊಂಡಿದ್ದ ಮಂಜು ಪಾವಗಡ ಅವರು ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಸದ್ಯ ಮಂಜು ಅವರು ಕೈ ಹಿಡಿದ ಹುಡುಗಿಯ ಹೆಸರು ನಂದಿನಿ.
ಮಂಜು ಅವರ ಕೈ ಹಿಡಿದ ಹುಡುಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಗುರು ಹಿರಿಯರ ಒಪ್ಪಿಗೆ ಮೇರೆಗೆ ಮಂಜು ಪಾವಗಡ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.
ತಮ್ಮ ಸರಳತೆ, ಹಾಸ್ಯ ಪ್ರಜ್ಞೆಯಿಂದಲೇ ಮನೆ ಮಾತಾಗಿರುವ ನಟ ಮಂಜು ಪಾವಗಡ ಬಿಗ್ ಬಾಸ್ ಮೂಲಕ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದರು.
ಮಂಜು ಪಾವಗಡ ಅವರು ಬೆಂಗಳೂರಿನಲ್ಲಿಯೇ ತಮ್ಮ ಹೊಸ ಮನೆಗೆ ಪ್ರವೇಶ ಮಾಡಿದ್ದರು. ಹೊಸ ಮನೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಇದೀಗ ಮಂಜು ಪಾವಗಡ ಅವರು ಎಂಗೇಜ್ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ನೆಚ್ಚಿನ ಹಾಸ್ಯ ನಟನಿಗೆ ಶುಭ ಹಾರೈಸುತ್ತಿದ್ದಾರೆ.