ಬೆಂಗಳೂರು : ಕನ್ನಡದ ಬಿಗ್ ಬಾಸ್ ಸೀಸನ್ 11 ಆವೃತ್ತಿಯ ಮೊದಲ ವಾರದ ಎಲಿಮಿನೇಷನ್ ಎಲ್ಲರ ಗಮನ ಸೆಳೆದಿದೆ. ಸದ್ಯ ಎಲಿಮಿನೇಷನ್ ಲಿಸ್ಟ್‌ನಲ್ಲಿ ಗೌತಮಿ ಜಾಧವ್, ಭವ್ಯಾ ಗೌಡ, ಮಾನಸ ಸಂತೋಷ್, ಹಂಸ ಪ್ರತಾಪ್, ಚೈತ್ರಾ ಕುಂದಾಪುರ, ಯಮುನಾ ಶ್ರೀನಿಧಿ, ಮೋಕ್ಷಿತಾ ಪೈ, ಶಿಶಿರ್ ಶಾಸ್ತ್ರಿ, ಜಗದೀಶ್ ನಾಮಿನೇಟ್ ಆಗಿದ್ದಾರೆ.
ಈ ಪೈಕಿ ಗೌತಮಿ, ಭವ್ಯಾ ಹಾಗೂ ಮನಸ ಅವರನ್ನು ಶನಿವಾರದ ಸಂಚಿಕೆಯಲ್ಲಿ ಸೇವ್ ಮಾಡಲಾಗಿದೆ. ಹಂಸ ಪ್ರತಾಪ್, ಚೈತ್ರಾ ಕುಂದಾಪುರ, ಯಮುನಾ ಶ್ರೀನಿಧಿ, ಮೋಕ್ಷಿತಾ ಪೈ, ಶಿಶಿರ್ ಶಾಸ್ತ್ರಿ, ಜಗದೀಶ್ ಡೇಂಜರ್ ಜೋನ್ನಲ್ಲಿದ್ದು, ಬಲ್ಲ ಮೂಲಗಳ ಪ್ರಕಾರ ನಟಿ ಯಮುನಾ ಶ್ರೀನಿಧಿ ಎಲಿಮಿನೇಟ್ ಆಗಿರುವ ಮೊದಲ ಕಂಟೆಸ್ಟಂಟ್ ಎಂದು ಹೇಳಲಾಗಿದೆ. ಅತಿ ಕಡಿಮೆ ವೋಟ್ ಪಡೆದಿರುವ ಕಾರಣ ಯಮುನಾ ಶ್ರೀನಿಧಿ ಅವರನ್ನು ಎಲಿಮಿನೇಟ್ ಮಾಡಲಾಗಿದೆ. ಆದರೆ, ಅಂತಿಮವಾಗಿ ಇಂದಿನ ಸಂಚಿಕೆ ಪ್ರಸಾರವಾಗುವರೆಗೂ ಕಾಯಬೇಕಿದೆ.ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್ , ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು.