ಶಿವಮೊಗ್ಗ: ಕೆ.ಎಸ್. ಈಶ್ವರಪ್ಪ ಹಾರಿಸಿದ ಬಂಡಾಯ ಈಗ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮಗನಿಗೆ ಹಾವೇರಿ ಗದಗ ಟಿಕೆಟ್ ತಪ್ಪಿದ್ದಕ್ಕೆ ಅಸಮಾಧಾನಗೊಂಡಿರುವ ಈಶ್ವರಪ್ಪ ಮನವೊಲಿಕೆಗೆ ಬಿಜೆಪಿ ನಾಯಕರು ಹರಸಾಹಸ ಪಡುತ್ತಿದ್ದಾರೆ. ಆದರೆ ಸಂಧಾನಕ್ಕೆ ಬಮ್ದ ಯಾವ ನಾಯಕರನ್ನೂ ಈಶ್ವರಪ್ಪ ಬಂದವರನ್ನು ಭೇಟಿಯಾಗದೆ ತನ್ನ ವಿರೋಧ ತೋರಿದ್ದಾರೆ.ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಮಾ.18ಕ್ಕೆ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಆದರೆ, ಕಾರ್ಯಕ್ರಮದ ವೇದಿಕೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ನೇರವಾಗಿ ಹೇಳಿದ್ದಾರೆ.. ಹೀಗಾಗಿ ಪ್ರಧಾನಿ ಮೋದಿ ಭೇಟಿಗೂ ಮುನ್ನ ಈಶ್ವರಪ್ಪ ಬಂಡಾಯ ಶಮನವಾಗುವುದು ಬಿಜೆಪಿಗೆ ಮುಖ್ಯವಾಗಿದೆ. ತೀರ್ಥಹಳ್ಳಿ ಶಾಸಕ ಆರಗ ಜ್ಞಾ ನೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಬಂದು ಈಶ್ವ ರಪ್ಪ ಅವರ ಮನವೊಲಿಸುವ ಪ್ರಯತ್ನ ಮಾಡಿದರು. ಸಂಧಾನಕ್ಕೆ ಈಶ್ವ ರಪ್ಪ ಮಣಿಯದ ಹಿನ್ನೆಲೆಯಲ್ಲಿ ವಾಪಾಸ್ ಮರಳಿದರು. ಮಧ್ಯಾಹ್ನ ಬಿಜೆಪಿ ಹೈಕಮಾಂಡ್ ಪರವಾಗಿ ಮನೆಗೆ ಪಕ್ಷದ ರಾಷ್ಟ್ರೀ ಯ ಪ್ರಧಾನ ಕಾರ್ಯದರ್ಶಿಮೋಹನ ಅಗರವಾಲ್ ಹಾಗೂ ರಾಜೇಶ್ ಬಂದಿದ್ದು , ಈಶ್ವ ರಪ್ಪ ನಿವಾಸದಲ್ಲಿ ಸಭೆ ನಡೆಸುತ್ತಿದ್ದಾರೆ. ಆದರೆ ಈ ವೇಳೆ ಈಗ ಬರುತ್ತೇನೆ ಎಂದು ಮನೆಯಿಂದ ಹೊರ ಹೋದ ಈಶ್ವರಪ್ಪ ಬಳಿಕ ಮಾತುಕತೆಗೆ ಬಾರದೆ ವಿರೋಧ ತೋರಿದ್ದಾರೆ. ಹಲವು ಹೊತ್ತು ಕಾದು ಕುಳಿತ ನಾಯಕರು ಈಶ್ವರಪ್ಪ ಮನೆಯಿಂದ ಹೊರ ನಡೆದಿದ್ದಾರೆ.