ಬಿಜೆಪಿಯವರು ರಾಮ, ಕೃಷ್ಣನನ್ನು ಬಿಟ್ಟು ಈಗ ದೇಶಕ್ಕೆ ನಾಮಕರಣ ಮಾಡಲು ಹೊರಟಿದ್ದಾರೆ : ಸಚಿವ ಮಧು ಬಂಗಾರಪ್ಪ…!

ಶಿವಮೊಗ್ಗ: ಬಿಜೆಪಿಯವರು ಇಂಟರ್ ನ್ಯಾಷನಲ್ ಇದ್ದಾರೆ.‌ ನಿಜವಾದ ಭಾರತೀಯರನ್ನೇ ಮರೆತಿರುವ ಭಾರತೀಯವರು ಇವರು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, 2023ರ ಚುನಾವಣೆಯಿಂದಲೂ ಇದ್ದನ್ನೆ ಮಾಡಿಕೊಂಡು ಬಂದಿದ್ದಾರೆ. ಇವರಿಗೆ ಭಾವನಾತ್ಮಕದಿಂದ ಉಪಯೋಗ ಇಲ್ಲ. ರಾಮ, ಕೃಷ್ಣನ ಬಿಟ್ಟರು ಈಗ ದೇಶಕ್ಕೆ ನಾಮಕರಣ ಮಾಡುವುದಕ್ಕೆ ಹೊರಟ್ಟಿದ್ದಾರೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಇಷ್ಟು ದಿನ ಏನೂ ತೊಂದರೆ ಇಲ್ಲದೇ ಸುಖವಾಗಿದ್ದೇವೆ ತಾನೇ ಎಂದು ಪ್ರಶ್ನಿಸಿದ ಅವರು, ಇಂಡಿಯನ್ ರಿಪಬ್ಲಿಕ್ ಫೆಡರೇಷನ್ ನಮ್ಮದು. ಇಂಡಿಯನ್ ರಿಪಬ್ಲಿಕ್ ಫೆಡರೇಷನ್ ಸಿಸ್ಟಮ್ ಇದೆ ಅಂತ ಅವರಿಗೆ ಗೂತ್ತಿಲ್ಲ. ಈಗ ಅಧಿಕಾರ ಇದೆ ಎಂದು ಬದಲಾವಣೆ ಮಾಡಿದರೆ ಏನು ಸಿಗುತ್ತದೆ. ಇಂಡಿಯಾವನ್ನು ಭಾರತ ಅಂತ ಬದಲಾಯಿಸಿದರೆ ಜನರೇ ಅವರಿಗೆ ಶಿಕ್ಷೆ ಕೊಡುತ್ತಾರೆ. ಅರ್ಜೆಂಟ್ ಆಗಿ ಎಲೆಕ್ಷನ್ ಮಾಡಲು ತೀರ್ಮಾನ ಮಾಡಿದ್ದಾರೆ, ನಾವಂತೂ ರೆಡಿ ಇದ್ದೇವೆ ಎಂದರು.

Advertisement

ಶಾಸಕ ಆರಗ ಜ್ಞಾನೇಂದ್ರ ಅವರು ಇಂಡಿಯಾ ಎಂಬುದಕ್ಕೆ ಯಾವುದೇ ಹಿನ್ನೆಲೆ ಇಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಆರಗ ಜ್ಞಾನೇಂದ್ರ ರವರಿಗೆ ಎಲ್ಲಿ ಹಿನ್ನೆಲೆ ಇತ್ತು ಎಂದು ಅವರು ತಿಳಿದುಕೊಂಡು ಬರಲಿ ಎಂದು ತಿರುಗೇಟು ನೀಡಿದರು. ಇಷ್ಟು ದಿನ ಇಂಡಿಯಾ ಅಂತ ಇತ್ತಲ್ವಾ ಏನಾದರೂ ತೊಂದರೆ ಆಗಿತ್ತಾ, ನನಗಂತೂ ಏನು ತೊಂದರೆ ಇರಲಿಲ್ಲ ಎಂದರು. ಇಂಡಿಯಾ ಅಂತ ಕ್ರಿಕೆಟ್​ನಲ್ಲಿ, ಒಲಿಪಿಂಕ್ಸ್​ನಲ್ಲಿ ಹಾಕಿಕೊಂಡು ಓಡಾಡಿದರು. ಮೌಂಟ್​ ಎವರೆಸ್ಟ್​ ಮೇಲೆ ಇಂಡಿಯಾದ ಫ್ಲ್ಯಾಗ್​ ಹಾಕಿದರು. ಈಗ ಚಂದ್ರಯಾನ ಮಾಡಿದ್ದು ಇಂಡಿಯಾ ಅಂತಾನೇ. ಸುಮ್ಮನೆ ಇಲ್ಲದೇ ಇರುವುದನ್ನು ಮಾಡಬಾರದು. ನೀವು ಏನು ಒಳ್ಳೆ ಕೆಲಸ ಮಾಡಿದ್ದಾರೆ ಅದನ್ನು ಹೇಳಿ? ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.

ಒಳ್ಳೆಯ ಕೆಲಸ ಮಾಡಿಲ್ಲ ಎಂದರೆ ಇಂತಹ ಭಾವನಾತ್ಮಕ ಆಟಗಳನ್ನು ಆಡುವುದನ್ನು ನಿಲ್ಲಿಸಬೇಕಾಗುತ್ತದೆ. ಇಲ್ಲವಾದರೆ ಜನರೇ ಶಿಕ್ಷೆ ಕೊಡುತ್ತಾರೆ. ಉದಯನಿಧಿ ಸ್ಟಾಲಿನ್​ರ ಸನಾತನ ಧರ್ಮದ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಯಾರು ಹೇಳಿಕೆ ನೀಡಿದ್ದಾರೂ ಅದಕ್ಕೆ ಅವರು ಬದ್ಧರಾಗಿರುತ್ತಾರೆ. ಅವರ ಭಾವನೆಯನ್ನು ಅವರು ವ್ಯಕ್ತಪಡಿಸಿದ್ದಾರೆ ಅದರ ಬಗ್ಗೆ ನಾನು ಟೀಕೆ, ಟಿಪ್ಪಣಿ ಮಾಡುವುದಿಲ್ಲ ಎಂದರು.

ಎರಡೇರಡು ಭಾರಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿ, ಹೈ ಜಂಪ್ ಮಾಡುವವರಿಗೆ ಇನ್ನೂಂದು ಚಾನ್ಸ್ ಕೊಟ್ಟಾಗ ಅವರು ಒಂದು ಇಂಚು ಎತ್ತರ ಜಿಗಿಯಬಹುದಾಗಿದೆ. ಅಭ್ಯಾಸವನ್ನು ಮಾಡಿರುತ್ತಾರೆ ಇದರಿಂದ ಅವರು ಮುಂದ ಹೋಗಲು ಸಹಾಯಕವಾಗುತ್ತದೆ. ಆರು ವಿಷಯಗಳ ಪೈಕಿ ಐದು ವಿಷಯದಲ್ಲಿ ಪಾಸಾಗಿ ಒಂದು‌ ವಿಷಯದಲ್ಲಿ ಫೇಲಾಗಿದ್ದರೆ ಆ ವಿದ್ಯಾರ್ಥಿಯನ್ನು ಒಂದು ವರ್ಷ ಕೊರಿಸುತ್ತಿರಾ?. ಮೊದಲನೇ ಬಾರಿ 60% ರಷ್ಟು ಅಂಕ ಪಡೆದ ವಿದ್ಯಾರ್ಥಿ ಎರಡನೇ ಬಾರಿ ಇನ್ನು ಚೆನ್ನಾಗಿ ಓದಿ 70% ತೆಗೆದುಕೊಳ್ಳುತ್ತಾರೆ ಎಂದು ಎರಡು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಿರುವುದನ್ನು ಸಮರ್ಥಿಸಿಕೊಂಡರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement