ಬೆಂಗಳೂರು: ‘2019ರಲ್ಲಿ ಬಿಜೆಪಿ ಅಧಿಕಾರವಿದ್ದಾಗ 385 ಹಿಂಸಾಚಾರ ಪ್ರಕರಣಗಳನ್ನು ವಾಪಸ್ ಪಡೆದುಕೊಂಡಿದೆ’ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ, ಅವರ ಅವಧಿಯ ಸರ್ಕಾರವಿದ್ದಾಗ 7,361 ರೌಡಿಶೀಟರ್ ಗಳನ್ನು ಹೊರ ಬಿಟ್ಟಿದ್ದಾರೆ. ಬಿಜೆಪಿಗರಿಗೆ ಮಾಡಲು ಕೆಲಸವಿಲ್ಲ, ತಮ್ಮ ಹುಳುಕು ದೋಸೆ ಅವರಿಗೆ ಕಾಣುತ್ತಿಲ್ಲ ಎಂದಿದ್ದಾರೆ.
ಒಂದು ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗದ ಇವರು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಡಿಕೆಶಿ ವ್ಯಂಗ್ಯವಾಡಿದ್ದಾರೆ.