ಬೆಳಗಾವಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಅವರನ್ನು ಕೆಳಗೆ ಇಳಿಸುವವರೆಗೂ ಯಾವುದೇ ಕಡೆ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರುವಿಜಯೇಂದ್ರ ನನ್ನನ್ನು ಕರೆದರೂ ಹೋಗುವುದಿಲ್ಲ. ಅವರ ಮುಖವನ್ನೂ ನೋಡುವುದಿಲ್ಲ. ಅಷ್ಟಕ್ಕೂ ನನ್ನನ್ನು ಪ್ರಚಾರಕ್ಕೆ ಕರೆಯಲು ವಿಜಯೇಂದ್ರ ಯಾರು ಪಕ್ಷದ ಹೈಕಮಾಂಡ್ ಪ್ರಚಾರಕ್ಕೆ ಹೋಗುವಂತೆ ತಿಳಿಸಿದರೆ ಹೋಗುವೆ. ಆದರೆ, ಈವರೆಗೂ ಯಾರೂ ನನ್ನನ್ನು ಪ್ರಚಾರಕ್ಕೆ ಕರೆದಿಲ್ಲ ಎಂದರು.