ಬೆಂಗಳೂರು : ಭಾರತೀಯ ಜನತಾ ಪಾರ್ಟಿಗೆ ರಾಜ್ಯಾಧ್ಯಕ್ಷರಾದ ವಿಜಯೇಂದ್ರರವರು ಮುಖ್ಯ ವಕ್ತಾರರು ಸೇರಿದಂತೆ 11 ಜನ ವಕ್ತಾರರನ್ನು ನಮೇಕ ಮಾಡಿ ಆದೇಶವನ್ನು ಹೂರಡಿಸಿದ್ದಾರೆ.
ಇದರಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಆಶ್ವತ್ ನಾರಾಯಣರವರು ಮುಖ್ಯ ವಕ್ತಾರರಾರಿದ್ದಾರೆ ಚಿತ್ರದುರ್ಗ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಹರಿಪ್ರಕಾಶ್ ಕೊಣೆಮನೆ, ಛಲವಾದಿ ನಾರಾಯಣಸ್ವಾಮಿ, ಡಾ.ತೇಜಸ್ವಿನಿ ಗೌಡ, ಎಂ.ಜಿ.ಮಹೇಶ್, ಹೆಚ್.ಎನ್.ಚಂದ್ರಶೇಖರ್, ಡಾ.ನರೇಂದ್ರ ರಂಗಪ್ಪ, ಕು.ಸುರಭಿ ಹೊದಿಗೆರೆ, ಅಶೋಕ ಕೆ.ಎಂ.ಗೌಡ ಹಾಗೂ ಹೆಚ್.ವೆಂಕಟೇಶ್ ದೊಡ್ಡೇರಿ ನೇಮಕವಾಗಿದ್ದಾರೆ.
ಇದೇ ರೀತಿ ಪಕ್ಷದಲ್ಲಿನ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಪ್ರಶಾಂತ್ ಮಾಕನೂರು, ಸಹ ಸಂಚಾಲಕರಾಗಿ ನರೇಂದ್ರ ಮೂರ್ತಿ, ಮಾಹಿತಿ ತಂತ್ರಜ್ಞಾನ ವಿಭಾಗಕ್ಕೆ ಸಂಚಾಲಕರಾಗಿ ನಿತಿನ್ ರಾಜ್ ನಾಯಕ್, ಸಹ ಸಂಚಾಲಕರಾಗಿ ಶ್ರೀಮತಿ ಶ್ಯಾಮಲಾ ರಘುನಂದನ್, ಮತ್ತು ಮಾಧ್ಯಮ ವಿಭಾಗಕ್ಕೆ ಸಂಚಾಲಕರಾಗಿ ಕರುಣಾಕರ ಖಾಸಲೆ ಸಂಹ ಸಂಚಾಲಕರಾಗಿ ಪ್ರಶಾಂತ ಕೆಡಂಜಿ ರವರನ್ನು ನೇಮಕ ಮಾಡಲಾಯಿತು.