ಬೆಂಗಳೂರು: ಬಿಟ್ ಕಾಯಿನ್ ಹಗರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ನಾಲ್ಕು ವರ್ಷಗಳಿಂದ ಭೂಗತವಾಗಿದ್ದ ಇಂಟರ್ ನ್ಯಾಷನಲ್ ಹ್ಯಾಕರ್ನನ್ನು ಎಸ್ಐಟಿ ತಂಡ ಬಂಧಿಸಿದೆ. ಪಂಜಾಬ್ ಮೂಲದ ನಟೋರಿಯಸ್ ಹ್ಯಾಕರ್ ರಾಜೇಂದ್ರಸಿಂಗ್ ಎಂಬಾತನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಶ್ರೀಕಿಗೂ ಮುನ್ನವೇ ಹ್ಯಾಕಿಂಗ್ನಲ್ಲಿ ಕೈಚಳಕ ತೋರಿ ಭೂಗತವಾಗಿದ್ದ ರಾಜೇಂದ್ರ ಸಿಂಗ್ನ ಸಿಐಡಿ ಎಡಿಜಿಪಿ ಮನೀಶ್ ಖರ್ಬೀಕರ್ ನೇತೃತ್ವದಲ್ಲಿ ಬಂಧಿಸಿದೆ. ಶ್ರೀಕಿಗೂ ಮೊದಲೇ ಹ್ಯಾಕಿಂಗ್ನಲ್ಲಿ ಎಕ್ಸ್ಫರ್ಟ್ ಆಗಿದ್ದ ರಾಜೇಂದ್ರಸಿಂಗ್ ಸರ್ಕಾರಿ ಹಾಗೂ ಖಾಸಗಿ ವೆಬ್ ಸೈಟ್ಗಳನ್ನು ಹ್ಯಾಕ್ ಮಾಡುತ್ತಿದ್ದ. ನಾಲ್ಕು ವರ್ಷಗಳಿಂದ ಕೇಂದ್ರ ತನಿಖಾ ಸಂಸ್ಥೆಗಳು ಹುಡುಕಾಟ ನಡೆಸುತ್ತಿದ್ದರು. ಶ್ರೀಕಿಯಿಂದ ಸುಮಾರು 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ವಶಕ್ಕೆ ಸಿಸಿಬಿ ಪಡೆದಿದ್ದ ವೇಳೆ ತನಿಖಾ ಸಮಯದಲ್ಲಿ ಪಂಜಾಬ್ನ ರಾಜೇಂದ್ರ ಸಿಂಗ್ ಹೆಸರು ಕೇಳಿಬಂದಿತ್ತು. ಹೀಗಾಗಿ ರಾಜೇಂದ್ರಸಿಂಗ್ ಬಂಧನಕ್ಕೆ ಎಸ್ಐಟಿ ಬಲೆ ಬೀಸಿತ್ತು. ಸದ್ಯ ಪಂಜಾಬ್ನಲ್ಲಿ ರಾಜೇಂದ್ರ ಸಿಂಗ್ನನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ. ರಾಜೇಂದ್ರ ಸಿಂಗ್ ವಿಚಾರಣೆ ಬಳಿಕ ಮತ್ತಷ್ಟು ಸತ್ಯ ಹೊರಬೀಳೋ ಸಾಧ್ಯತೆ ಇದೆ.