ಬೆಂಗಳೂರು : ಬಿಡಿಎ ಎಂದರೆ Bengaluru Development Authority ಅಲ್ಲ, ಬದಲಿಗೆ Bengaluru’s Disappointing Authority ಎಂದು ಮಾಜಿ ಸಚಿವ ಸುರೇಶ್ ಕುಮಾರ್ ತಮ್ಮ ಪೇಸ್ ಬುಕ್ ಪೋಸ್ಟ್ ನಲ್ಲಿ ಹಾಕಿಕೊಂಡಿದ್ದಾರೆ.. ಒಂದು ವಾರದಲ್ಲೇ ಬಿಡಿಎ ಇಎಂ ಎತ್ತಂಗಡಿಯಾಗಿರೋದ್ರ ಬಗ್ಗೆ ಸುರೇಶ್ ಕುಮಾರ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.. ಅಲ್ದೇ ತಮ್ಮದೇ ಸಮಸ್ಯೆಗಳಲ್ಲಿ ಮುಳಗಿರುವ ಸಿಎಂ ಅಡಳಿತದ ಮೇಲೆ ತಮ್ಮ ಹಿಡಿತ ಕಳೆದುಕೊಳ್ಳುತ್ತಿದ್ದಾರಯೇ ಎಂದು ಪ್ರಶ್ನೆ ಮಾಡಿದ್ದಾರೆ… ಸುರೇಶ್ ಕುಮಾರ್ ಅವರ ಪೋಸ್ಟ್ ವಿವರ ಹೀಗಿದೆ.. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಅಭಿಯಂತರ ಸದಸ್ಯ (Engineer Member) ಎಂಬ ಹುದ್ದೆ ಒಂದಿದೆ… ಕಳೆದ ಕೆಲವು ವರ್ಷಗಳಿಂದ ಆ ಹುದ್ದೆಯಲ್ಲಿ ಡಾ. ಎಚ್.ಆರ್. ಶಾಂತ ರಾಜಣ್ಣ ಎಂಬ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದರು.. 22.7.24 ರಂದು ಆ ಜಾಗಕ್ಕೆ ಟಿ.ಡಿ ನಂಜುಂಡಪ್ಪ ಎಂಬುವವರನ್ನು ಸರ್ಕಾರ ವರ್ಗಾಯಿಸಿ ಆದೇಶ ನೀಡಲಾಗಿತ್ತು… ನಂಜುಂಡಪ್ಪ EM ಸ್ಥಾನಕ್ಕೆ ವರ್ಗಾವಣೆಯಾಗಿ ಬಂದಾಗ ಅವರಿಗೆ ಶಾಂತರಾಜಣ್ಣ ಹುದ್ದೆ ಬಿಟ್ಟುಕೊಡಲೇ ಇಲ್ಲ… ಹೀಗೆ ಅಧಿಕಾರ ಹಸ್ಥಾಂತರವಾಗದಿದ್ದರೂ , ನಂಜುಂಡಪ್ಪ ತಾವಾಗಿಯೇ ಅಧಿಕಾರ ಸ್ವೀಕರಿಸಿ ಕರ್ತವ್ಯ ನಿಭಾಯಿಸಲು ಪ್ರಾರಂಭಿಸಿದರು. ಆ ಹುದ್ದೆಯಿಂದ ವರ್ಗಾವಣೆಯಾದರೂ ಶಾಂತರಾಜಣ್ಣ, ತಾವು ಉಪಯೋಗಿಸುತ್ತಿದ್ದ ಬಿಡಿಎ ಗೆ ಸೇರಿದ ಅಧಿಕೃತ ಕಾರನ್ನು ಹಿಂದಿರುಗಿಸದೆ ತಾನೇ ಇಟ್ಟುಕೊಂಡಿದ್ದರು. ಜೊತೆಗೆ ಅತಿ ಶೀಘ್ರದಲ್ಲಿಯೇ ಇದೇ ಹುದ್ದೆಗೆ ಮರುನೇಮಕವಾಗಿ ಬರುವ ವಿಶ್ವಾಸ ವ್ಯಕ್ತಪಡಿಸಿದ್ದರು..22.7.24 ರಂದು, ಅಂದರೆ ಸುಮಾರು 20 ದಿನಗಳ ಹಿಂದಷ್ಟೇ ನೇಮಕವಾಗಿದ್ದ ಟಿ. ಡಿ ನಂಜುಂಡಪ್ಪನವರನ್ನು..ನಿನ್ನೆ ಸರ್ಕಾರ ವರ್ಗಾಯಿಸಿ ಆ ಜಾಗಕ್ಕೆ ನಿಕಟ ಪೂರ್ವ EM ಆಗಿದ್ದ ಶಾಂತ ರಾಜಣ್ಣ ಅವರನ್ನು ಮತ್ತೆ ನಿಯೋಜಿಸಿದೆ.. ಇದರಿಂದ ಉದ್ಭವವಾಗುತ್ತಿರುವ ಕೆಲ ಪ್ರಶ್ನೆಗಳು : * ಹೆಚ್.ಆರ್. ಶಾಂತ ರಾಜಣ್ಣ ಅವರನ್ನು ವರ್ಗಾವಣೆ ಮಾಡಿದ್ದು ಏತಕ್ಕೆ..? * ಯಾರ ಶಿಫಾರಸ್ಸಿನ ಮೇಲೆ? * ಅಥವಾ ಯಾವ ಕಾರಣಕ್ಕಾಗಿ? * ಇಪ್ಪತ್ತು ದಿನಗಳ ಅಂತರದಲ್ಲಿಯೇ ಅವರನ್ನು ವಾಪಸ್ಸು ಮರುವರ್ಗಾವಣೆ ಮಾಡಿರುವುದು ಏತಕ್ಕೆ..? * ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕೆಲ ದಿನಗಳ ಹಿಂದೆ ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಟಿಡಿ ನಂಜುಂಡಪ್ಪ ಸ್ಥಾನಕ್ಕೆ ಹೆಚ್.ಆರ್. ಶಾಂತರಾಜಣ್ಣ ಅವರನ್ನು ಮತ್ತೆ ನಿಯೋಜಿಸುವಂತೆ ಮನವಿ ಮಾಡಿದ್ದರಂತೆ. ಇದರ ಹಿನ್ನೆಲೆ ಏನು..? * ಬಿಡಿಎ ಕಾರನ್ನು ತಾನು ವರ್ಗಾವಣೆಯಾದ ನಂತರ ಶಾಂತ ರಾಜಣ್ಣ ಹಿಂತಿರುಗಿಸದೆ ಇದ್ದದ್ದು ಶಿಸ್ತು ಉಲ್ಲಂಘನೆ ಅಲ್ಲವೇ..? * ಮತ್ತೆ ಶೀಘ್ರದಲ್ಲಿಯೇ ತನ್ನ ಜಾಗಕ್ಕೆ ವಾಪಸ್ಸು ಬರುತ್ತೇನೆ ಎಂಬ ವಿಶ್ವಾಸ ಶಾಂತರಾಜಣ್ಣನವರಿಗೆ ಬಂದದ್ದು ಹೇಗೆ? ಒಟ್ಟಿನಲ್ಲಿ ಬಿಡಿಎ ಪ್ರತಿದಿನ ತನ್ನ ವರ್ಚಸ್ಸನ್ನು ವೃದ್ಧಿಸಿಕೊಳ್ಳುವುದಕ್ಕಿಂತ ತನ್ನ ವರ್ಚಸ್ಸು ಕಳಪೆಯಾಗಿಸುವ ದಿಕ್ಕಿನಲ್ಲಿ ಸಾಗಿರುವುದು ನಿಜ… ಬಿಡಿಎ ಎಂದರೆ Bengaluru Development Authority ಅಲ್ಲ. ಬದಲಿಗೆ Bengaluru’s Disappointing Authority..ನಾಗರಿಕರನ್ನು, ನಿವೇಶನ ಪಡೆದುಕೊಂಡಿರುವ ಹಂಚಿಕೆದಾರರನ್ನು ಈ ಪ್ರಾಧಿಕಾರ Disappoint ಮಾಡುತ್ತಿರುವುದು ನೂರಕ್ಕೆ ನೂರು ಬಿಡಿಎನಲ್ಲಿ ತಮ್ಮದೇ ಸಮಸ್ಯೆಗಳಲ್ಲಿ ಮುಳುಗಿರುವ ಮುಖ್ಯಮಂತ್ರಿಗಳು ಆಡಳಿತದ ಮೇಲೆ ತಮ್ಮ ಹಿಡಿತ ಕಳೆದುಕೊಳ್ಳುತ್ತಿದ್ದಾರೆಯೇ?..