ರಸ್ತೆ ಬದಿ ಬಿದ್ದು ಸಿಕ್ಕಿದ್ದ ಬೆಲೆಬಾಳುವ ಐಫೋನ್ ಒಂದನ್ನು ಯುವತಿಯೊಬ್ಬಳು ಅದರ ಮಾಲೀಕನಿಗೆ ನೀಡಿದ್ದಾಳೆ.
ಆದರೆ ಕಳೆದುಹೋದ ಪೋನ್ ಸಿಕ್ಕಿದ ಖುಷಿಗೆ ಆತ ಯುವತಿಗೆ ಕವರ್ ಒಂದನ್ನು ಗಿಫ್ಟ್ ಆಗಿ ನೀಡಿದ್ದಾನೆ.
ಚೀನಾದ ಗುವಾಂಗ್ಡಾಂಗ್ನಲ್ಲಿ ಮಹಿಳೆಯೊಬ್ಬಳು ತನ್ನಗೆ ಬಿದ್ದು ಸಿಕ್ಕಿದ ಐಫೋನ್ ಅನ್ನು ಮಾಲೀಕನಿಗೆ ಹಿಂದಿರುಗಿಸಿದ ನಂತರ, ಆಕೆಗೆ 35ಸಾವಿರದಷ್ಟು ಖೋಟಾ ನೋಟುಗಳನ್ನು ಗಿಫ್ಟ್ ಮಾಡಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಆತನ ವಿರುದ್ದ ಪೊಲೀಸ್
ಠಾಣೆಯಲ್ಲಿ ಕೇಸು ದಾಖಲಿಸಿದ್ದಾಳೆ.