ಬೆಂಗಳೂರು : ಬಿಪಿಎಲ್, ಎಪಿಎಲ್ ಕಾರ್ಡ್‌ದಾರರಿಗೆ ಸರ್ಕಾರ ಬಿಗ್ ಶಾಕ್ ನೀಡಿದ್ದು, ಆಧಾರ್(ಇ ಕೆವೈಸಿ) ಜೋಡಣೆಯಾಗದ ಬಿಪಿಎಲ್, ಎಪಿಎಲ್ ಕಾರ್ಡ್‌ಗಳನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅಮಾನತುಗೊಳಿಸಿದೆ.
ಈಗಾಗಲೇ ಲಕ್ಷಾಂತರ ಎಪಿಎಲ್ ಕಾರ್ಡ್‌ಗಳು ರದ್ದಾಗಿದೆ. ಜೊತೆಗೆ 60 ಸಾವಿರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಶಿಫ್ಟ್ ಮಾಡಲಾಗಿದೆ. ರೇಷನ್ ಅಂಗಡಿಗೆ ಜನರು ತೆರಳಿದಾಗಲೇ ಈ ವಿಚಾರ ಗಮನಕ್ಕೆ ಬಂದಿದೆ. ರಾಜ್ಯದಲ್ಲಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಿದ ಬೆನ್ನಲ್ಲೆ ಆಹಾರ ಇಲಾಖೆ ಇದೀಗ ಎಪಿಎಲ್ ಕಾರ್ಡ್ದಾರರಿಗೂ ಶಾಕ್ ನೀಡಿದೆ.
22 ಲಕ್ಷ ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್‌ಗಳನ್ನು ಆಹಾರ ಇಲಾಖೆ ಅಮಾನತು ಮಾಡಿದ್ದು ಸರಿಯಾಗಿ ಕೆವೈಸಿ ಜೋಡಣೆಯಾದ ಬಳಿಕ ಈ ಕಾರ್ಡ್‌ದಾರರಿಗೆ ಅಕ್ಕಿ ದೊರೆಯಲಿದೆ.