ಬೆಂಗಳೂರು: ರಾಜ್ಯದ ಹಾಲಿ ಮುಖ್ಯಮಂತ್ರಿ ಯಾರು ಎಂಬುವುದು ನಮ್ಮ ಬಿಬಿಎಂಪಿ ಅಧಿಕಾರಿಗಳಿಗೆ ಗೊತ್ತಿಲ್ಲ ಎಂದು ಈ ಫೋಟೋ ಹೇಳುತ್ತಿದೆ.
ಏಕೆಂದರೆ ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹಾಲಿ ಸಿಎಂ ಸಿದ್ದರಾಮಯ್ಯ ಅವರ ಫೋಟೋ ಹಾಕುವ ಬದಲಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಫೋಟೋ ಅಳಡಿಸಲಾಗಿದೆ.
ಅಧಿಕಾರಿಗಳು ತಮ್ಮ ಎಡವಟ್ಟು ತಿಳಿಯುತ್ತಿದ್ದಂತೆ ಕೂಡಲೇ ಚಿಕ್ಕಪೇಟೆ ವಾಡ್೯ ನಂಬರ್ 109ರ ಇಂದಿರಾ ಕ್ಯಾಂಟೀನ್‌ನ ಮೇಲೆ ಹಾಕಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ಫೋಟೋವನ್ನು ತೆರವುಗೊಳಿಸಿದ್ದಾರೆ.
ಬಡಜನರ ಹಸಿವು ನಿಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗರದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು. ಇನ್ನು ಕ್ಯಾಂಟೀನ್ ತೆರೆಯಲು ಸ್ಥಳವಿಲ್ಲದ ಕಡೆ ಮೊಬೈಲ್ ಕ್ಯಾಂಟೀನ್‌ಗಳನ್ನು ತೆರೆಯಲಾಗಿತ್ತು.

































