ಬೆಂಗಳೂರು: ಮದ್ಯಪ್ರಿಯರು ಕುಡಿಯಲು ಬಯಸಿದರೆ ಎಲ್ಲೋ ಗುಡ್ಡಕಾಡಿಗೆ ಹೋಗಿಯಾದರು ಮದ್ಯ ವನ್ನು ಖರೀದಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ .ರಾಜ್ಯ ಸರ್ಕಾರ ಬಿಯರ್ ತಯಾರಿ ಘಟಕಗಳಿಗೆ ರಾತ್ರಿ ಪಾಳಿಯ ಕೆಲಸ ಸ್ಥಗಿತಗೊಳಿಸುವಂತೆ ಹೊರಡಿಸಿರುವ ಆದೇಶದಿಂದ ರಾಜ್ಯದಲ್ಲಿ ಬಿಯರ್ ಕೊರತೆ ಉಂಟಾಗುವ ಸಾಧ್ಯತೆ ಎದುರಾಗಿದೆ.
ಡಿಸೆಂಬರ್ ಅಂದರೆ ಎಲ್ಲ ಹೊರದೇಶದಿಂದ ಊರಿಗೆ ಬಂದು ಮೋಜು ಮಾಸ್ತಿ ಮಾಡಿ ಸಂಭ್ರಮಿಸೋ ಸಮಯ ಕ್ರಿಸ್‌ಮಸ್, ಹೊಸ ವರ್ಷ ವರ್ಷದ ಆಚರಣೆ ಹಾಗೂ ಇತರ ಮೋಜು ಮಸ್ತಿ ಕಾರ್ಯಕ್ರಮಗಳಿಗೆಸರ್ಕಾರದ ಆದೇಶದಿಂದ ಮದ್ಯ ಸರಬರಾಜು ವ್ಯತ್ಯಯವಾಗಲಿದೆ ಎಂಬ ಆತಂಕವನ್ನು ಬಿಯರ್ ಉತ್ಪಾದನಾ ಘಟಕದ ಅಧಿಕಾರಿಗಳು ಹಾಗೂ ಮದ್ಯ ಮಾರಾಟಗಾರರ ಸಂಘ ವ್ಯಕ್ತಪಡಿಸಿದೆ.
ಈ ಸರಕಾರ ಅಧಿಕಾರಕ್ಕೆ ಬಂದ ನಂತರ ಮದ್ಯದ ಮೇಲಿನ ಸುಂಕವನ್ನು ಶೇ. 20 ರಷ್ಟು ಹೆಚ್ಚಳ ಮಾಡಿತ್ತು ನಂತರ ಮದ್ಯ ಮಾರಾಟದಲ್ಲಿ ಕುಸಿತ ಕಂಡಿತ್ತು. ಈಗ ಮದ್ಯ ಮಾರಾಟ ಚೇತರಿಸಿಕೊಳ್ಳುತ್ತಿರುವ ಬೆನ್ನ ಹಿಂದೆಯೇ ಸರ್ಕಾರದ ಈ ಆದೇಶ ಮತ್ತೆ ಮದ್ಯ ಮಾರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಅಧಿಕವಾಗಿದೆ.
ಯಾವುದೇ ಸರಕಾರ ಬಂದರು ಮೊದಲು ಬರೆಹಾಕುವುದು ಲಾಭಕಾರಿ ಇಲಾಖೆಗೆ ಬಿಯರ್‌ನಿಂದ ಸರಕಾರಕ್ಕೆ 3 ಸಾವಿರ ಕೋಟಿಗೂ ಅಧಿಕ ಆದಾಯ ಸರ್ಕಾರ ಈ ವರ್ಷ 36 ಸಾವಿರ ಕೋಟಿ ರೂ.ಗಳ ಅಬಕಾರಿ ಆದಾಯದ ಗುರಿ ಹೊಂದಿದೆ. 2023ರ ನವೆಂಬರ್‌ವರೆಗೆ 22,157.25ಕೋಟಿ ರೂ. ಆದಾಯ ಬಂದಿದೆ. ಇದರಲ್ಲಿ ಬಿಯರ್ ಮಾರಾಟದಿಂದ ಸರ್ಕಾರಕ್ಕೆ3,515.76 ಕೋಟಿ ರೂ. ಆದಾಯ ಬಂದಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇತರ ಮದ್ಯ ಮಾರಾಟದಿಂದ 17,762 ಕೋಟಿ ರೂ. ಆದಾಯ ಸರ್ಕಾರಕ್ಕೆ ಬಂದಿದೆ.
ಬಿಯರ್ ಉತ್ಪಾದನೆ ಕುಸಿತವಾಗುವಂತೆ ಮಾಡಿ ದೇಶಿಯ ಮದ್ಯ ಮಾರಾಟ ಅಧಿಕಗೊಳಿಸಲು ಮಾಡಿರುವ ಹುನ್ನಾರ ಎಂಬ ಆರೋಪ ಕೂಡ ಕೇಳಿ ಬಂದಿದೆ.
ರಾಜ್ಯದಲ್ಲಿ ಪ್ರತಿ ವರ್ಷ 3.8 ಹೆಕ್ಟೊ ಲೀಟರ್ ಮದ್ಯ ಸೇವನೆ ರಾಜ್ಯದಲ್ಲಿ ಮದ್ಯ ಪ್ರಿಯರು ಪ್ರತಿವರ್ಷ ಅಂದಾಜು 3.8 ಹೆಕ್ಟೊ ಲೀಟರ್ ಮದ್ಯ ಸೇವಿಸುತ್ತಾರೆ ಎಂದು ವರದಿ ತಿಳಿಸಿದೆ. ರಾಷ್ಟçಮಟ್ಟಕ್ಕೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಶೇ.11 ರಷ್ಟು ಮದ್ಯ ಮಾರಾಟವಾಗುತ್ತಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಆಚರಣೆಯಲ್ಲಿ ಬಿಯರ್ ಮಾರಾಟ ಅಧಿಕಗೊಳ್ಳುತ್ತದೆ.
ಯಾವ ಘಟಕ ರಾತ್ರಿ ಪಾಳಿ ರದ್ದುಯುನೈಟೆಡ್ ಬ್ರೂವರೀಸ್, ಎಬಿ ಇನ್‌ಬೆವ್, ಕಾರ್ಲಸ್‌ಬರ್ಗ್, ಬಿ೯ ಬ್ರೂವರೀಸ್ (ಬೀರಾ) ಘಟಕಗಳಿಗೆ ರಾತ್ರಿ ಪಾಳಿಯಲ್ಲಿ ಬಿಯರ್ ತಯಾರಿಕೆಗೆ ನೀಡಿದ್ದ ಅನುಮತಿಯನ್ನು ಹಿಂದಕ್ಕೆ ಪಡೆಯಲಾಗಿದೆ.
ಸರ್ಕಾರದ ಆದೇಶ ಏನುಅಬಕಾರಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಬಿಯರ್ ತಯಾರಿಕಾ ಘಟಕಗಳು ರಾತ್ರಿ 10 ರಿಂದ ಬೆಳಗ್ಗೆ6 ಗಂಟೆವರೆಗೆ ಇದ್ದ ಪಾಳಿಯನ್ನು ನಿಲ್ಲಿಸಬೇಕು ಎಂದು ಡಿ6 ರ ಪತ್ರದಲ್ಲಿ ಆದೇಶದಲ್ಲಿ ತಿಳಿಸಿದೆ. ಸಿಬ್ಬಂದಿ ಕೊರತೆ ಅಧಿಕವಾಗಿರುವುದರಿಂದ ರಾತ್ರಿ ಪಾಳಿಗೆ ಅಧಿಕಾರಿಗಳ ನಿಯೋಜನೆ ಕಷ್ಟವಾಗುತ್ತಿದೆ ಹೀಗಾಗಿ ಕೆಲ ದಿವಸ ರಾತ್ರಿ ಪಾಳಿಯನ್ನು ಸ್ಥಗಿತಗೊಳಿಸಬೇಕು ಎಂದು ಸೂಚಿಸಿದೆ. ಮೈಸೂರಿನ ೪ ಬಿಯಾರ್ ತಯಾರಿಕಾ ಘಟಕಗಳಿಗೆ ರಾತ್ರಿ ಪಾಳಿಗೆ ನೀಡಿದ್ದ ಅನುಮತಿಯನ್ನು ಇಲಾಖೆ ಹಿಂದಕ್ಕೆ ಪಡೆದಿದೆ.