ಬೇಕಾಗುವ ಸಾಮಗ್ರಿ :
ಸ್ಟ್ರಾಬೆರಿ – 10, ಸಕ್ಕರೆ – 2 ದೊಡ್ಡ ಚಮಚ, ತಣ್ಣನೆಯ ಹಾಲು – 1ಕಪ್, ವೆನಿಲ್ಲಾ ಐಸ್ಕ್ರೀಂ – 1 ಕಪ್, ಬಾದಾಮಿ ಹಾಗೂ ಪಿಸ್ತಾ ಸಣ್ಣದಾಗಿ ಹೆಚ್ಚಿಕೊಂಡಿದ್ದು – 1 ಚಮಚ
ಮಾಡುವ ವಿಧಾನ :
ಜ್ಯೂಸರ್ ಜಾರಿಗೆ ಸ್ಟ್ರಾಬೆರಿ ಹಾಗೂ ಸಕ್ಕರೆಯನ್ನ ಹಾಕಿ ರುಬ್ಬಿಕೊಳ್ಳಿ. ಇದು ಪೇಸ್ಟ್ ರೀತಿಯಲ್ಲಿ ಆದ ಬಳಿಕ ಇದಕ್ಕೆ ಹಾಲು ಹಾಗೂ ಐಸ್ಕ್ರೀಂನ್ನು ಹಾಕಿ ಇನ್ನೊಮ್ಮೆ ರುಬ್ಬಿಕೊಳ್ಳಿ.
ಬೇಕಿದ್ದಲ್ಲಿ ನೀವು ಇದಕ್ಕೆ ಐಸ್ ಕ್ಯೂಬ್ಗಳನ್ನ ಸೇರಿಸಬಹುದು. ಇಲ್ಲವಾದಲ್ಲಿ ಹಾಲನ್ನ ಕುದಿಸಿ ತಣ್ಣ ಮಾಡಿ ಬಳಿಕ ಫ್ರಿಜ್ನಲ್ಲಿಟ್ಟು ಬಳಕೆ ಮಾಡಲೂಬಹುದು.
ಈ ಮಿಶ್ರಣವನ್ನ ಒಂದು ಗಾಜಿನ ಲೋಟಕ್ಕೆ ಹಾಕಿ ಡ್ರೈ ಫ್ರೂಟ್ಸ್ ಹಾಗೂ ಸ್ಟ್ರಾಬೆರಿ ಹೋಳುಗಳಿಂದ ಅಲಂಕರಿಸಿ.