ಪಾಟ್ನಾ:ಬಿಹಾರದಲ್ಲಿ ಜೆಡಿಯು ಹಾಗೂ ಬಿಜೆಪಿ ಮೈತ್ರಿಕೂಟ ಸರ್ಕಾರ ಸೋಮವಾರ ಸದನದಲ್ಲಿ ವಿಶ್ವಾಸಮತ ಪರೀಕ್ಷೆ ಎದುರಿಸಲಿದೆ. ಆದರೆ ಸುಲಭ ಗೆಲುವಿನ ಭರವಸೆ ಮೈತ್ರಿಕೂಟದಲ್ಲಿದೆ. ಮೊದಲು ವಿಶ್ವಾಸಮತ ಯಾಚನೆ ಮಾಡಿ . ಬಳಿಕ ರಾಜ್ಯದ ಬಜೆಟ್ ಅಧಿವೇಶನ ಆರಂಭವಾಗಲಿದೆ.
ಒಟ್ಟು 243 ಸದಸ್ಯ ಬಲದ ಬಿಹಾರದಲ್ಲಿ ಬಹುಮತಕ್ಕೆ 122 ಸದಸ್ಯರ ಅಗತ್ಯವಿದ್ದು, ಬಿಜೆಪಿ-ಜೆಡಿಯು ಮೈತ್ರಿಕೂಟ 128 ಸದಸ್ಯರನ್ನು ಹೊಂದಿದೆ. ಬಿಜೆಪಿಯ 78 ಶಾಸಕರಿದ್ದು, ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳ 45 ಶಾಸಕರನ್ನು ಹೊಂದಿದೆ.
ಜಿತಿನ್ ರಾಮ್ ಮಾಂಜಿಯವರ ಹಿಂದೂಸ್ತಾನ್ ಅವಾಮ್ ಮೋರ್ಚಾ 4 ಸ್ಥಾನಗಳನ್ನು ಹೊಂದಿದೆ. ಉಳಿದಂತೆ ಒಬ್ಬ ಪಕ್ಷೇತರ ಈ ಮೈತ್ರಿಕೂಟವನ್ನು ಬೆಂಬಲಿಸಿದ್ದಾರೆ. ವಿರೋಧಿ ಕೂಟವಾಗಿರುವ ರಾಷ್ಟ್ರೀಯ ಜನತಾದಳ ಮತ್ತು ಕಾಂಗ್ರೆಸ್ 114 ಸ್ಥಾನಗಳನ್ನು ಹೊಂದಿದೆ.