ಬೆಂಗಳೂರು : ಬುರ್ಖ ಹಾಕಿ ಬಟ್ಟೆ ಕಳ್ಳತನ ಮಾಡಿದ್ದು, ಬಟ್ಟೆ ಕದ್ದು ಬುರ್ಖಾದ ಒಳಗಿಟ್ಟು ಖತರ್ನಾಕ್ ಲೇಡಿಸ್ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಮುಸ್ತಾಫಾ ಬೇಗ್ ಎಂಬುವವರಿಂದ ಪೊಲೀಸ್ ವೆಬ್ ಸೈಟ್ ನಲ್ಲಿ ದೂರು ದಾಖಾಲಿಸಿದ್ದಾರೆ. ಮೂರು ಜನ ಮಹಿಳೆಯರು ಬಟ್ಟೆ ಖರೀದಿ ನೆಪದಲ್ಲಿ ಆರ್ ಟಿ ನಗರ ಬಳಿಯಿರುವ ಬಟ್ಟೆ ಅಂಗಡಿ ಬಂದಿದ್ದಾರೆ. ಬಟ್ಟೆ ನೋಡೊ ನೆಪದಲ್ಲಿ ಸುಮಾರು 20 ಸಾವಿರ ರೂಪಾಯಿ ಮೌಲ್ಯದ ಸೀರೆಗಳುನ್ನ ಕದ್ದು ಬುರ್ಖಾದೊಳಗೆ ಇಳಿಸಿದ್ದಾರೆ.ಮೂವರು ಮಹಿಳೆಯರು ಬಟ್ಟೆ ಕದ್ದಿರೋ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬುರ್ಖಾ ಧರಿಸಿ ಕಳ್ಳತನ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ಅಂಗಡಿ ಮಾಲೀಕರು ಮನವಿ ಮಾಡಿದ್ದಾರೆ. ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಬುರ್ಖಾ ಹಿಂದಿನೆ ಮುಖ ಯಾರದ್ದು ಅಂತ ಕಂಡು ಹಿಡಿಯೋದು ಪೊಲೀಸ್ರಿಗೆ ತಲೆ ನೋವಾಗಿದೆ.